ವಾಜಪೇಯಿ, ಅಡ್ವಾಣಿ ಸಹಿತ ಅನೇಕ ಕಾರ್ಯಕರ್ತರ ಶ್ರಮದ ಫಲವೇ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ: ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಿ. ಅಟಲ್​ ಬಿಹಾರಿ ವಾಜಪೇಯಿ, ಲಾಲ್​ ಕೃಷ್ಣ ಅಡ್ವಾಣಿ, ದಿ. ದೀನದಯಾಳ್​ ಉಪಾಧ್ಯಾಯ ಹಾಗೂ ಅನೇಕ ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ದೇಶ ಹಾಗೂ ಅನೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮುಂಬೈ ನಾಗ್ಪುರದ ಡಾ.ಹೆಡಗೇವಾರ್ ಸ್ಮೃತಿ ಭವನ ಆವರಣದಲ್ಲಿ ಶಿಕ್ಷಕರು ಮತ್ತು ಮೇಲ್ವಿಚಾರಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಗಡ್ಕರಿ ಅವರು,ಈ ಹಿಂದೆ ನಾನು ಮುಂಬೈನ ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಅದು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ, 1980ರಲ್ಲಿ ಮುಂಬೈನಲ್ಲಿ ನಡೆದ ಸಮಾವೇಶವೊಂದರಲ್ಲಿ ವಾಜಪೇಯಿ ಭಾಗಿಯಾಗಿ ಮಾತನಾಡಿದ್ದರು.ಕತ್ತಲೆ ಮರೆಯಾಗಲಿದೆ. ಸೂರ್ಯ ಉದಯಿಸಲಿದ್ದಾನೆ. ದೇಶದಲ್ಲಿ ಕಮಲ ಅರಳಲಿದೆ(ಅಂಧೇರಾ ಛಟೇಗಾ, ಸೂರಜ್​ ನಿಕ್ಲೇಗಾ, ಔರ್​ ಕಮಲ್​​ ಖಿಲೇಗಾ) ಎಂದು ಅವರು ಹೇಳಿದ್ದರು ಎಂದು ನೆನಪು ಮಾಡಿಕೊಂಡರು.

ಈ ಭಾಷಣವನ್ನು ನಾನು ಕೇಳಿದ್ದೆ. ಅಂದು ಅವರು ಆಡಿರುವ ಮಾತು ಕೇಳಿದ್ದ ಎಲ್ಲರೂ ಅಂತಹದೊಂದು ದಿನ ಮುಂದೆ ಬರಲಿದೆ ಎಂದು ನಂಬಿದ್ದರು. ಇದೀಗ ನಾವು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಹಾಗೂ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು. ಅಟಲ್​ ಬಿಹಾರಿ ವಾಜಪೇಯಿ, ಅಡ್ವಾಣಿ ಜೊತೆ ಜೊತೆಗೆ ಅನೇಕ ನಾಯಕರು, ಕಾರ್ಯಕರ್ತರು ಶ್ರಮದಿಂದ ದುಡಿದಿದ್ದಾರೆ ಎಂದು ಗಡ್ಕರಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!