ಹೊಸದಿಗಂತ ವರದಿ, ಮೈಸೂರು:
ದಕ್ಷಿಣ ಪದವೀಧರ ರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮೈ.ವಿ.ರವಿಶಂಕರ್ ಅವರು ಗುರುವಾರ ತಮ್ಮ ನಾಮಪತ್ರ ವನ್ನು ಸಲ್ಲಿಸಿದರು.
ಮೈಸೂರಿನ ಕಲಾಮಂದಿರ ಎದುರು ಇರುವ ಪ್ರಾದೇಶಿಕ ಆಯುಕ್ತರ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಪ್ರಕಾಶ್ ರಿಗೆ ಸಲ್ಲಿಸಿದರು. ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರುಗಳಾದ ಎಸ್.ಟಿ.ಸೋಮಶೇಖರ್, ನಾರಾಯಣ ಗೌಡ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಪ್ರೀತಮ್ ಗೌಡ, ನಿರಂಜನ್ ಕುಮಾರ್, ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀ ವತ್ಸ ಮತ್ತಿರರು ಸಾಥ್ ನೀಡಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ