Wednesday, June 7, 2023

Latest Posts

ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಪರ ಕೇಂದ್ರ ಸಚಿವ ಕಿಶನ್ ಪಾಲ್ ಗುರ್ಜರ್ ರೋಡ್ ಶೋ

ಹೊಸ ದಿಗಂತ ವರದಿ, ಬಳ್ಳಾರಿ:

ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ. ಸೋಮಶೇಖರ ರೆಡ್ಡಿ ಅವರ ಪರ ಕೇಂದ್ರ ಇಂಧನ, ಕೈಗಾರಿಕ ಸಚಿವ ಕಿಶನ್ ಪಾಲ್ ಗುರ್ಜರ್ ಅವರು ಮಂಗಳವಾರ ನಗರದಲ್ಲಿ ಬೃಹತ್ ರೊಡ್ ಶೋ ನಡೆಸಿದರು. ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ, ನಗರದ ತಾಳೂರ ರೊಡ್, ನಾಗಪ್ಪ ಕಟ್ಟೆ ವರೆಗೆ ನಡೆಯಿತು.

ದಾರಿಯುದ್ದಕ್ಕೂ ಅಭಿಮಾನಿಗಳಿಂದ ಹೂ‌ ಮಳೆ‌ ಸುರಿದವು. ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಜಿ. ಸೋಮಶೇಖರ ರೆಡ್ಡಿ ಅವರೊಂದಿಗೆ ಕೈ‌ ಬೀಸಿ ಜನರ ಗಮನಸೆಳೆದರು.

ಬಿಜೆಪಿ ಜಿಲ್ಲಾದ್ಯಕ್ಷ ಗೋನಾಳ್ ಮುರಹರಗೌಡ, ಮಹಾನಗರ ಪಾಲಿಕೆ ಸದಸ್ಯರಾದ ಟಿ.ಶ್ರೀನಿವಾಸ್ ಮೋತ್ಕರ್, ಕೊನಂಕಿ ತೀಲಕ್ ಕುಮಾರ್, ಹನುಮಂತ ಗುಡಿಗಂಟಿ, ಎಸ್. ಮಾಲ್ಲನಗೌಡ, ನಗರದ ಅಧ್ಯಕ್ಷ ಕೆ. ಬಿ.ವೆಂಕಟೇಶ್ವರ , ಪ್ರಧಾನ ಕಾರ್ಯದರ್ಶಿ ಕೆ.ರಾಮಂಜಿನಿ, ರಾಮ್ ಪ್ರಸಾದ್, ಬಳ್ಳಾರಿ ಜಿಲ್ಲಾ ಬಿಜೆಪಿ ಮಾಧ್ಯಮ ಸಹ ಸಂಚಾಲಕ ತೊಗರಿ ರಾಜೀವ್, ಮಹಿಳಾ ಮೋರ್ಚಾದ ಪುಷ್ಪಲತಾ, ರೂಪಶ್ರೀ, ಲಕ್ಷ್ಮಿ ದೇವಿ ಸೇರಿದಂತೆ ವಿವಿಧ ಪದಾಧಿಕಾರಿಗಳು, ಯುವ ಮೋರ್ಚಾದ ಬಾಲಚಂದ್ರ, ಎಸ್ಟಿ ಮೋರ್ಚಾ ವೀರೇಶ್, ರೈತ ಮೋರ್ಚಾ ಸತ್ಯನಾರಾಯಣ ಸೇರಿದಂತೆ ಅಪಾರ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!