ಕಲಬುರಗಿಯಲ್ಲಿ ಹಕ್ಕು ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಉಮೇಶ್‌ ಜಾಧವ್‌

ದಿಗಂತ ವರದಿ ಕಲಬುರಗಿ:

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾಕ್ಟರ್ ಉಮೇಶ್ ಜಾಧವ್ ಅವರು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 93ರ ಜವಾಹರ ಶಿಕ್ಷಣ ಸಂಸ್ಥೆಯ ಶ್ರೀ ಸೀತಾದೇವಿ ಕನ್ನಡ ಪ್ರಾಥಮಿಕ ಶಾಲೆ ಏನ್ ಜಿ ಓ ಕಾಲೋನಿಯಲ್ಲಿ ಮತದಾನ ಮಾಡಿದರು.

ಮತದಾನಕ್ಕೂ ಮುನ್ನ ಅಭ್ಯರ್ಥಿ ಡಾಕ್ಟರ್ ಉಮೇಶ್ ಜಾಧವ್ ಅವರು ಕಲಬುರಗಿ ಆರಾಧ್ಯದೈವ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಮತಗಟ್ಟೆಗೆ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!