ಬಿಜೆಪಿ ಕಾಂಗ್ರೆಸ್ ಪೋಸ್ಟರ್ ವಾರ್: ರಾಗಾ ರಾವಣ-ಮೋದಿ ಸುಳ್ಳುಗಾರ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್-ಬಿಜೆಪಿ ನಡುವೆ ಪೋಸ್ಟರ್ ವಾರ್ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪೋಸ್ಟ್ ಮಾಡಿರುವ ಪೋಸ್ಟರ್‌ಗಳು ವೈರಲ್ ಆಗಿವೆ. ಬಿಜೆಪಿ ರಾಹುಲ್ ಗಾಂಧಿಯನ್ನು ರಾವಣ ಎಂದು ಕರೆದಿದ್ದು, ರಾವಣನ ಪೋಸ್ಟರ್ ಮಾಡಿದೆ.

Imageಇದನ್ನು ಬಲವಾಗಿ ಟೀಕಿಸಿರುವ ಕಾಂಗ್ರೆಸ್ ಪ್ರಧಾನಿ ಮೋದಿಯನ್ನು ದೊಡ್ಡ ಸುಳ್ಳುಗಾರ ಎಂದು ಕರೆದು ಪೋಸ್ಟ್ ಮಾಡಿದೆ.

Imageಈಗಿನ ಹೊಸ ಯುಗದ ರಾವಣ ರಾಹುಲ್ ಗಾಂಧಿ, ಕೆಟ್ಟ ಮನುಷ್ಯ, ಧರ್ಮ ವಿರೋಧಿ, ರಾಮನ ವಿರೋಧಿ ಈತನ ಮುಖ್ಯ ಉದ್ದೇಶ ಭಾರತವನ್ನು ನಾಶ ಮಾಡುವುದು. ಸಿನಿಮಾ ಪ್ರಡೂಸ್ ಮಾಡಿದ್ದು ಕಾಂಗ್ರೆಸ್ ಪಾರ್ಟಿ, ನಿರ್ದೇಶನ ಜಾರ್ಜ್ ಸೋರೋಸ್ ಎಂದು ಬಿಜೆಪಿ ಪೋಸ್ಟ್ ಮಾಡಿದೆ.

ಇದಕ್ಕೆ ಉತ್ತರವಾಗಿ ಕಾಂಗ್ರೆಸ್, ಅತೀ ದೊಡ್ಡ ಸುಳ್ಳುಗಾರ ಯಾರು? ಎನ್ನುವ ಪ್ರಶ್ನೆ ಹಾಕಿದ್ದು, ಪ್ರಧಾನಿ ಮೋದಿ ಕೈ ಎತ್ತಿರುವ ಫೋಟೊ ಹಾಕಿ ನಾನು ಸುಳ್ಳುಗಾರ ಎಂದು ಹೇಳಿರುವಂತೆ ಎಡಿಟ್ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!