ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಭೈರತಿ ಬಸವರಾಜ್, ನಾರಾಯಣಗೌಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಒಳಗೊಂಡ ಬಿಜೆಪಿ ಸತ್ಯಶೋಧನಾ ಸಮಿತಿ ಸೋಮವಾರ ನಾಗಮಂಗಲ ಗಲಭೆ ನಡೆದ ಸ್ಥಳಕ್ಕೆ ಭೇಟಿ ನೀಡಲಿದೆ.
ಇತ್ತೀಚೆಗಷ್ಟೇ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ಉಂಟಾಗಿದ್ದ ನಾಗಮಂಗಲ ಗಲಭೆಯ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಲು ಬಿಜೆಪಿ ನಿಯೋಗ ಭೇಟಿ ನೀಡಲಿದೆ. ಆ ದಿನ ಏನಾಯ್ತು ಅನ್ನೋ ಬಗ್ಗೆ ಇಂಚಿಂಚೂ ಮಾಹಿತಿ ಕಲೆಹಾಕಲಿದೆ.
ಇದರೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಬದ್ರಿಕೊಪ್ಪಲು ಬಡಾವಣೆಗೂ ಸಮಿತಿ ಭೇಟಿ ನೀಡಲಿದೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಯು ಆರಂಭದಿಂದ ಅಂತ್ಯದ ವರೆಗೆ ಏನೆಲ್ಲಾ ಆಯ್ತು ಅನ್ನೋದರ ಬಗ್ಗೆ ಸತ್ಯಶೋಧನಾ ಸಮಿತಿ ವಿಷಯ ಸಂಗ್ರಹಿಸಲಿದೆ.