ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭೆ ಚುನಾವಣಾ ದಿನಾಕಂ ಘೋಷಣೆಯಾಗುತ್ತಿದ್ದಂತೆ, ಎಲ್ಲ ಪಕ್ಷಗಳ ಮುಖಂಡರು ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಅಧಿಕಾರ ಗದ್ದುಗೆ ಹಿಡಿಯಲು ಎಲ್ಲ ಪಕ್ಷಗಳೂ ಭರದ ಸಿದ್ಧತೆ ನಡೆಸುತ್ತಿವೆ. ಪ್ರಮುಖವಾಗಿ ಬಿಜೆಪಿ ತೆಲಂಗಾಣದ ಮೇಲೆ ತನ್ನ ಸಂಪೂರ್ಣ ಗಮನ ಹರಿಸಿದೆ. ಇದರ ಭಾಗವಾಗಿ ಬಿಜೆಪಿಯ ಪ್ರಮುಖ ನಾಯಕರು ತೆಲಂಗಾಣ ಭೇಟಿಗೆ ಅಣಿಯಾಗಿದ್ದಾರೆ.
ಇದರ ಭಾಗವಾಗಿ ಹಲವು ಬಿಜೆಪಿ ನಾಯಕರು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಬಳಿಕ ಇತರೆ ಕೇಂದ್ರ ನಾಯಕರ ಭೇಟಿಯ ದಿನಾಂಕ ನಿಗದಿಯಾಗಿದ್ದು, ಈ ರೀತಿಯಿದೆ..
ಅಕ್ಟೋಬರ್ 10 ಇಂದು ಅಮಿತ್ ಶಾ ಭೇಟಿ
14 ರಂದು ಕೇಂದ್ರ ಸಚಿವ ಪಿಯೂಷ್ ಗೋಯಲ್
15 ರಂದು ಮುಶಿರಾಬಾದ್‌ಗೆ ಸಾದ್ವಿ ನಿರಂಜನ ಜ್ಯೋತಿ ಭೇಟಿ
16 ರಂದು ಹುಜೂರಾಬಾದ್‌ನ ಮಹೇಶ್ವರಂನಲ್ಲಿ ರಾಜನಾಥ್ ಸಿಂಗ್
1ರಂದು ಮಧಿರಾದಲ್ಲಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಪ್ರಚಾರ ನಡೆಸಲಿದ್ದಾರೆ.
ಬಿಜೆಪಿಯ ಎಲ್ಲ ಪ್ರಮುಖ ನಾಯಕರು ತೆಲಂಗಾಣಕ್ಕೆ ಭೇಟಿ ನೀಡಿ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ತೆಲಂಗಾಣದಲ್ಲಿ ಅಧಿಕಾರಕ್ಕಾಗಿ ಹಠ ಹಿಡಿದಿರುವ ಬಿಜೆಪಿ ಆ ನಿಟ್ಟಿನಲ್ಲಿ ತೆಲಂಗಾಣದತ್ತ ತನ್ನ ಚಿತ್ತ ನೆಟ್ಟಿದೆ. ಬಿಜೆಪಿ ನಾಯಕತ್ವದ ನಿರ್ದೇಶನದ ಮೇರೆಗೆ ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲೂ ಬೈಕ್ ರ‍್ಯಾಲಿ ನಡೆಸಲು ನಾಯಕರು ಈಗಾಗಲೇ ನಿರ್ಧರಿಸಿದ್ದಾರೆ.