ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾ ಕುಟುಂಬದಲ್ಲಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಸಂಭ್ರಮ-ಸಡಗರ ಶುರುವಾಗಿದೆ. ಮದುವೆಯ ಎಲ್ಲಾ ಕೆಲಸಗಳನ್ನು ರಾಮ್ ಚರಣ್ ಪತ್ನಿ ಉಪಾಸನಾ ನೋಡಿಕೊಳ್ಳುತ್ತಿದ್ದಾರಂತೆ. ಮದುವೆಗೆ ಸಂಬಂಧಿಸಿದ ಎಲ್ಲಾ ಅಪ್‌ಡೇಟ್‌ಗಳನ್ನು ತಿಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮದುವೆ ಸಮಾರಂಭ ಎಲ್ಲೆಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಮದುವೆ ಇಟಲಿಯ ಟಸ್ಕನಿಯಲ್ಲಿ ನಡೆಯಲಿದೆ ಎಂಬುದು ಈಗಾಗಲೇ ಬಹಿರಂಗವಾಗಿದೆ.
ಮತ್ತು ಮದುವೆಯ ಸ್ಥಳದ ಅಲಂಕಾರ ವಿನ್ಯಾಸಗಳನ್ನು ಸಹ ಉಪಾಸನಾ ಆಯ್ಕೆ ಮಾಡಿದ್ದಾರೆಂದು ತಿಳಿದಿದೆ. ತಮ್ಮ Instagram ಸ್ಟೋರಿಯಲ್ಲಿ ಕೆಲವು ಸಂಬಂಧಿತ ವಿನ್ಯಾಸಗಳನ್ನು ಹಂಚಿಕೊಂಡಿದ್ದಾರೆ. ವರುಣ್ ಮತ್ತು ಲಾವಣ್ಯ ಇಟಲಿಯಲ್ಲಿ ಮದುವೆಯಾಗಲಿದ್ದಾರೆ ಎಂಬುದು ತಿಳಿದರೂ ಮದುವೆಯ ದಿನಾಂಕದ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ. ನವೆಂಬರ್ ಮೊದಲ ವಾರದಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವರುಣ್ ಮತ್ತು ಲಾವಣ್ಯ ಮಿಸ್ಟರ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಬಳಿಕ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಅಂತರಿಕ್ಷಂ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ನಟಿಸುವ ವೇಳೆಗೆ ಇವರಿಬ್ಬರ ನಡುವಿನ ಪ್ರೀತಿ ಗಟ್ಟಿಯಾಗಿತ್ತು. ಈಗ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಸಪ್ತಪದಿ ತುಳಿಯಲಿದ್ದಾರೆ. ಇಟಾಲಿಯಲ್ಲು ಮದುವೆಯ ನಂತರ ಹೈದರಾಬಾದ್‌ನಲ್ಲಿ ಪಾರ್ಟಿ ನಡೆಯಲಿದೆ ಎಂದು ತಿಳಿದಿದೆ.