ಚುನಾವಣಾ ಪ್ರಣಾಳಿಕೆ ರೂಪಿಸಲು ಜನರಿಂದ ಸಲಹೆಗಾಗಿ ‘ಸಲಹಾಪೆಟ್ಟಿಗೆ’ ರೂಪಿಸಿದ ಬಿಜೆಪಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ರೂಪಿಸುವುದಕ್ಕೂ ಮುನ್ನ ಅದರಲ್ಲಿ ಏನಿರಬೇಕೆಂಬುದಕ್ಕೆ ಜನರಿಂದ ಸಲಹೆಗಳನ್ನು ಸ್ವೀಕರಿಸುವುದಕ್ಕೆ ಸಲಹಾ ಪೆಟ್ಟಿಗೆಗಳನ್ನು ರೂಪಿಸಿದೆ. ಬುಧವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಡಾ. ಕೆ ಸುಧಾಕರ ಅವರು ಈ ಮಾದರಿಗಳನ್ನು ಪ್ರದರ್ಶಿಸಿ ಮಾತನಾಡಿದರು.

ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿಯು ಸಮೃದ್ಧ ಕರ್ನಾಟಕವೇ ಬಿಜೆಪಿಯ ಭರವಸೆ ಎಂಬ ಘೋಷಣೆಯೊಂದಿಗೆ ಕೆಲಸ ಮಾಡಲಿದೆ. ಚುನಾವಣೆ ಹೊಸ್ತಿಲಲ್ಲಿ ನಾವಿದ್ದೇವೆ. ಕರ್ನಾಟಕವನ್ನು ಹೆಮ್ಮೆಯ ರಾಜ್ಯವನ್ನಾಗಿ ಮಾಡಲು ಬದ್ಧರಿದ್ದೇವೆ. ಭವ್ಯ ಭವಿಷ್ಯಕ್ಕೆ ನಾವು ಸಿದ್ಧತೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕನಿಷ್ಠ 50 ಸೆಕ್ಟರ್ ಸಭೆಗಳನ್ನು ಮಾಡಲಾಗುವುದು. ತೋಟಗಾರಿಕೆ, ರೇಷ್ಮೆ ಸೇರಿ ಕೃಷಿ ವಲಯದ ಸಭೆ, ಕೈಗಾರಿಕೆ, ಸಣ್ಣ ಮಧ್ಯಮ, ಗುಡಿ ಕೈಗಾರಿಕೆ ಸಬಲೀಕರಣಕ್ಕೆ ತಂಡದ ಸಭೆ ನಡೆಸಲಾಗುತ್ತದೆ. ಈ ಸೆಕ್ಟರ್ ಸಭೆಗಳಲ್ಲಿ ಕೇಂದ್ರ ಸಚಿವರು, ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆ ಎಂದು ವಿವರ ನೀಡಿದರು.

8 ಸಾವಿರ ಸಲಹಾ ಪೆಟ್ಟಿಗೆ

ವಾಟ್ಸಪ್ ಸಂಖ್ಯೆ +91 8595158158 ಗೆ ಜನಸಾಮಾನ್ಯರು ಪ್ರಣಾಳಿಕೆ ಕುರಿತು ಸಲಹೆ ನೀಡಬಹುದು. ಕ್ಯೂ ಆರ್ ಕೋಡ್ ಮೂಲಕ ಸಲಹೆ ನೀಡಬಹುದು. ಮಂಡಲದ ವಿವಿಧೆಡೆ 25 ಬಾಕ್ಸ್ ಸೇರಿ ಒಟ್ಟು 8 ಸಾವಿರ ಸಲಹಾ ಪೆಟ್ಟಿಗೆ ಇಡಲಾಗುವುದು. ಬಾಕ್ಸ್ ಮೇಲೆ ವೆಬ್ ಸೈಟ್ ವಿವರ ನೀಡಲಾಗಿದೆ. ರಾಜ್ಯದ ಒಂದು ಕೋಟಿಗೂ ಹೆಚ್ಚು ಜನರನ್ನು ತಲುಪುವ ಗುರಿಯನ್ನು ಬಿಜೆಪಿ ಹೊಂದಿದ್ದು, ಮಾರ್ಚ್ 25ರವರೆಗೆ 224 ಕ್ಷೇತ್ರಗಳಲ್ಲೂ ಸಭೆ ನಡೆಯಲಿದೆ. ಜೊತೆಗೆ ವಿಡಿಯೋ ವ್ಯಾನ್ ಪ್ರಗತಿ ರಥದಲ್ಲೂ ಸಲಹಾ ಪೆಟ್ಟಿಗೆ ಇರುತ್ತದೆ ಎಂದು ಸಚಿವರು ವಿವರ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!