ಹೊಸದಿಗಂತ ಡಿಜಿಟಲ್ ಡೆಸ್ಕ್:
ʼಬಿಜೆಪಿಯು ದೆಹಲಿಗೆ ಕಸದ ರಾಶಿಯನ್ನು ಬಿಟ್ಟರೆ ಮತ್ತೇನನ್ನೂ ನೀಡಿಲ್ಲʼ ಎಂದು ಆಪ್ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಆರೋಪಿಸಿದ್ದಾರೆ. ಗುರುವಾರ ಉತ್ತರ ಪ್ರದೇಶದ ಗಾಜಿಪುರಕ್ಕೆ ಆಗಮಿಸಿದ ಅವರು ಬಿಜೆಪಿಯ ಬೆಂಬಲಿಗರ ಬಳಿ ʼ ಸ್ವಲ್ಪ ಯೋಚಿಸಿ, ಬಿಜೆಪಿ ದೆಹಲಿಗೆ ಮಣ್ಣು, ಕಸದ ಬೆಟ್ಟಗಳನ್ನು ಬಿಟ್ಟು ಏನು ಕೊಟ್ಟಿದೆ, ಒಮ್ಮೆ ಪಕ್ಷ ಮರೆತು ದೇಶಕ್ಕಾಗಿ ಮತ ಹಾಕಿʼ ಎಂದು ಮನವಿ ಮಾಡಿದ್ದಾರೆ.
ದೆಹಲಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ 15 ರಿಂದ ದೆಹಲಿಯ ಮಹಾನಗರ ಪಾಲಿಕೆಯಲ್ಲಿ ಕುಳಿತಿರುವ ಬಿಜೆಪಿಯವರು ದೆಹಲಿಯಲ್ಲಿ ಎಲ್ಲೆಂದರಲ್ಲಿ ಕಸ ಹರಡಿದ್ದಾರೆ, ಇಂದು ನಾನು ಅವರ ಗಾಜಿಪುರದ ಕಸದ ಪರ್ವತವನ್ನು ನೋಡಲು ಬಂದಿದ್ದೇನೆʼ ಎಂದಿದ್ದಾರೆ.
ಮುಂದೊಂದು ದಿನ ಸಂಬಿತ್ ಪಾತ್ರಾ ಕೂಡ ಬಿಜೆಪಿ ಕೊಳಕು ಪಕ್ಷ ಮತ್ತು ಆಪ್ ಉತ್ತಮ ಪಕ್ಷ ಎಂದು ಹೇಳಲಿದ್ದಾರೆ. ಎಲ್ಲ ಬಿಜೆಪಿ ಕಾರ್ಯಕರ್ತರು ಎಎಪಿಯ ಭಾಗವಾಗುವ ದಿನ ಬರಲಿದೆ ಎಂದು ಹೇಳಿದ್ದಾರೆ.
ಅಲ್ಲದೆ ತನ್ನನ್ನು ತಾನು ಜಾದೂಗಾರ ಎಂದು ಕರೆದುಕೊಂಡ ಅವರು, ‘ನಾನು ಜಾದೂಗಾರ, ಮನ ಗೆಲ್ಲುವುದು ಗೊತ್ತು, ಜನರಿಗಾಗಿ ದುಡಿಯುತ್ತೇನೆಯೇ ಹೊರತು ಅವರಂತೆ ಕಪ್ಪು ಬಾವುಟ ಹಿಡಿದು ನಿಲ್ಲುವುದಿಲ್ಲ’ ಎಂದಿದ್ದಾರೆ.