ಬಿಜೆಪಿ ದಲಿತರಿಗೆ ಡಿಸಿಎಂ ಹುದ್ದೆಯನ್ನು ನೀಡಿದೆ, ಮುಂದೆ ಸಿಎಂ ಸ್ಥಾನವನ್ನೂ ನೀಡಿದರೂ ಆಶ್ಚರ್ಯವಿಲ್ಲ: ಛಲವಾದಿ ನಾರಾಯಣಸ್ವಾಮಿ

ಹೊಸದಿಗಂತ ವರದಿ, ಮೈಸೂರು:

ದಲಿತರಿಗೆ ಬಿಜೆಪಿ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಿದೆ. ಬರುವ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನವನ್ನೂ ನೀಡಿದರೂ ಆಶ್ಚರ್ಯವಿಲ್ಲ ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷರಾದ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಭಾನುವಾರ ನಗರದ ಲಲಿತಮಹಲ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಮೈಸೂರಿನಲ್ಲಿ ನಡೆದ ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟಿçÃಯ ಕಾರ್ಯಕಾರಣಿಯಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂಬುದರ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಆದರೆ ಮೋರ್ಚಾದ ರಾಜ್ಯ ಕಾರ್ಯಕಾರಣಿಯಲ್ಲಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಈಗಾಗಲೇ ಸಚಿವರಾದ ಗೋವಿಂದ ಕಾರಜೋಳ ಸೇರಿದಂತೆ ದಲಿತ ಸಮುದಾಯದ ಇಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರನ್ನು ಪಕ್ಷ ರಾಷ್ಟçಪತಿಯನ್ನಾಗಿ ಮಾಡಿದೆ. ಹಾಗೆಯೇ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ದಿನಗಳು ಕೂಡ ದೂರ ಇಲ್ಲ ಎಂದರು.
ಕಾಂಗ್ರೆಸ್ ಎಂದರೆ ದಲಿತರು, ದಲಿತರು ಎಂದರೆ ಕಾಂಗ್ರೆಸ್ ಎಂಬAತೆ ವೋಟ್ ಬ್ಯಾಂಕ್ ರಾಜಕಾರಣವನ್ನು ಕಳೆದ ೫೦ ವರ್ಷಗಳಿಂದ ಮಾಡಿಕೊಂಡು ಬಂದಿರುವ ಕಾಂಗ್ರೆಸ್, ಇಲ್ಲಿಯ ತನಕ ಕರ್ನಾಟಕ ರಾಜ್ಯದಲ್ಲಿ ದಲಿತ ಸಮುದಾಯದ ಯಾವ ನಾಯಕರಿಗೂ ಮುಖ್ಯಮಂತ್ತಿ ಸ್ಥಾನವನ್ನು ನೀಡಲಿಲ್ಲ. ಹಾಗಾಗಿ ದಲಿತರಿಗೆ ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನೇಕೆ ನೀಡಿಲ್ಲ ಎಂದು ಕೇಳುವ ಯಾವ ನೈತಿಕತೆಯೂ ಕಾಂಗ್ರೆಸ್‌ಗೆ ಇಲ್ಲ. ಆದರೆ ದಲಿತ ಸಮುದಾಯದವರಾದ ನಾವು ಇಲ್ಲಿಯ ತನಕ ನಮ್ಮ ಸಮುದಾಯವರಿಗೇಕೆ ನೀವು ಮುಖ್ಯಮಂತ್ರಿ ಸ್ಥಾನವನ್ನು ನೀಡಲಿಲ್ಲ ಎಂದು ಕೇಳುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಅಂದರೆ ದಲಿತ, ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಸುಳ್ಳು ಹಬ್ಬಿಸುತ್ತಿತ್ತು.ನಮ್ಮ ಬಿಜೆಪಿ ಸರಕಾರ ಬಂದ ಮೇಲೆ ಜನರಿಗೆ ದಲಿತರನ್ನು ಯಾವ ರೀತಿ ಗೌರವಿಸುತ್ತೇವೆ ಎಂದು ಗೊತ್ತಾಗಿದೆ.
ಸಂವಿಧಾನ ಬಗ್ಗೆ ಸಂಸತ್ ಸದನದಲ್ಲಿ ಚರ್ಚೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಅವಕಾಶ ಕೊಟ್ಟಿದೆ ನಮ್ಮ ಸರಕಾರ. ಜಮ್ಮು ಮತ್ತು ಕಾಶ್ಮೀರದಲ್ಲಿ , ಸಂವಿಧಾನ ಜಾರಿಯಲ್ಲಿರಲಿಲ್ಲ. ಮೀಸಲಾತಿ ಇರಲಿಲ್ಲ, ಈಗ ಅಲ್ಲೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಮೀಸಲಾತಿಯನ್ನು ಜಾರಿಗೊಳಿಸಿದ್ದೇವೆ. ಈ ಕೆಲಸವನ್ನು ಯಾಕೇ ಕಳೆದ ೫೦ ವರ್ಷಗಳಲ್ಲಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ರನ್ನು ಹೆಚ್ಚು ನೋಯಿಸದ್ದು ಕಾಂಗ್ರೆಸ್. ಓಟು ಬ್ಯಾಂಕ್ ಗಾಗಿ ದಲಿತರನ್ನು ಉಪಯೋಗಿಸಿದರೇ ಹೊರತು ಅವರನ್ನು ಉದ್ದಾರ ಮಾಡಲಿಲ್ಲ. ದಲಿತರನ್ನು ಕೇವಲ ಓಟು ಬ್ಯಾಂಕ್ ಮಾಡಿಕೊಂಡಿತು. ಆ ಮೂಲಕ ದಲಿತ ಸಮುದಾಯಕ್ಕೆ ವಂಚನೆ ಮಾಡಿದೆ ಎಂದು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!