Tuesday, March 28, 2023

Latest Posts

ಬಿಜೆಪಿ ಹತಾಶೆಯಾಗಿ ಮೋದಿ, ಅಮಿತ್ ಶಾರನ್ನು ಕರೆಸುತ್ತಿದೆ: ಶಾಸಕ ಪ್ರಿಯಾಂಕ್ ಖಗೆ೯

ಹೊಸದಿಗಂತ ವರದಿ,ಕಲಬುರಗಿ:

ರಾಜ್ಯದಲ್ಲಿ ಬಿಜೆಪಿ ಪಕ್ಷದವರ ಪರಿಸ್ಥಿತಿ ನೋಡಿದರೆ, ನನಗೆ ಅವರ ಮೇಲೆ ಕನಿಕರ ಬರುತ್ತಿದ್ದು,ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹತಾಶೆಗೊಂಡು,ಪದೇ ಪದೇ ರಾಜ್ಯಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ, ನಡ್ಡಾರನ್ನು ಕರೆಸುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖಗೆ೯ ಹೇಳಿದ್ದಾರೆ.

ಜಿಲ್ಲೆಯ ಚಿತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ನಾಯಕರಿಗೆ ಸ್ವಂತ ಅವರ ಮೇಲೆಯೇ ನಂಬಿಕೆ ಹೊರಟು ಹೋಗಿದ್ದು,ಈ ಕಾರಣಕ್ಕಾಗಿ ಮೋದಿಯವರನ್ನು ರಾಜ್ಯಕ್ಕೆ ಬುಲಾವ್ ಮಾಡುತ್ತಿದ್ದಾರೆ ಎಂದ ಅವರು,ಇವರೆಷ್ಟೆ ತಿಪ್ಪರಲಾಗ ಹಾಕಿದರೂ,ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ನುಡಿದರು.

ಕಳ್ಳರಲ್ಲಿ ಎರಡು ವಿಧದ ಕಳ್ಳರಿದ್ದು,ಒಂದು “ರಾಜಕೀಯ ಕಳ್ಳರು” ಇನ್ನೊಂದು “ಸಾಮಾನ್ಯ ಕಳ್ಳರು”.ಸಾಮಾನ್ಯ ಕಳ್ಳರು ಪಿಕ್ ಪಾಕೇಟ್,ಮೊಬೈಲ್ ಕಳ್ಳತನ ಮಾಡುತ್ತಾರೆ. ಆದರೆ, ರಾಜಕೀಯ ಕಳ್ಳರು ನಮ್ಮ ಉದ್ಯೋಗ, ಕನಸು, ಶಿಕ್ಷಣ, ಭವಿಷ್ಯವನ್ನು ಕಳ್ಳತನ ಮಾಡುತ್ತಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!