ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತ ಅಸಮಾಧಾನವನ್ನು ಸರಿಪಡಿಸಲು ಖುದ್ದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೇ ಅಖಾಡಕ್ಕೆ ಇಳಿದಿದ್ದು, ಇಂದು ಶಾಸಕರು, ಎಂಎಲ್ಸಿಗಳ ಸಭೆ ಕರೆಯುವ ಮೂಲಕ ಸಭೆಯಲ್ಲಿ ಚರ್ಚಿಸಿ ಮೈತ್ರಿಗೆ ಸರ್ವಾನುಮತದಿಂದ ಒಪ್ಪಿಗೆ ಪಡೆಯಲಾಯಿತು.
ಜೆಡಿಎಸ್ – ಬಿಜೆಪಿ ದೋಸ್ತಿಗೆ, ಜೆಡಿಎಸ್ ಪಕ್ಷದಲ್ಲೇ ಕೆಲವೊಂದಷ್ಟು ಶಾಸಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ, ಮೈತ್ರಿಯ ಅನಿವಾರ್ಯತೆ, ಪಕ್ಷದಲ್ಲಿನ ಗೊಂದಲ ನಿವಾರಿಸಲು ಖುದ್ದು ಮಾಜಿ ಪ್ರಧಾನಿ ದೇವೆಗೌಡರು(HD Devegowda) ಇಂದು ಬಿಡದಿಯ ತೋಟದ ಮನೆಯಲ್ಲಿ ಶಾಸಕರು, ಎಂಎಲ್ಸಿಗಳು, ಮಾಜಿ ಶಾಸಕರ ಸಭೆ ಕರೆಯುವ ಮೂಲಕ ಮೈತ್ರಿ ಸಂಬಂಧ ಚರ್ಚಿಸಿದರು.
ಮೈತ್ರಿ ಸಭೆಗೆ ಜೆಡಿಎಸ್ ನ 19 ಶಾಸಕರ ಪೈಕಿ 17 ಜನ ಶಾಸಕರು ಹಾಜರಾಗಿದ್ರು, ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೆಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಭೆಗೆ ಗೈರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ(JDS CM Irbrahim) ಗೆ ಖುದ್ದು ಮಾಜಿ ಪ್ರಧಾನಿ ದೇವೆಗೌಡರು ಕಾಲ್ ಮಾಡಿ ಸಭೆಗೆ ಬರುವಂತೆ ತಿಳಿಸಿದ್ರೂ ಸಭೆಗೆ ಗೈರಾಗುವ ಮೂಲಕ ಬಹಿರಂಗವಾಗಿಯೇ ಮೈತ್ರಿಗೆ ಅಸಮಧಾನ ಹೊರಹಾಕಿದ್ದಾರೆ. ಇತ್ತ ಶಾಸಕರಾದ ಶರಣ್ ಗೌಡ ಕಂದಕೂರು ಹಾಗೂ ಹನ್ನೂರು ಶಾಸಕ ಮಂಜುನಾಥ್ ಕೂಡ ಸಭೆಗೆ ಗೈರಾಗಿದ್ದು, ನಿಖಿಲ್ ಕುಮಾರಸ್ವಾಮಿ(Nikhil kumaraswamy) ಪೋನ್ ಮಾಡುವ ಮೂಲಕ ಅವರನ್ನ ಮನವೊಲಿಸುವ ಕೆಲಸ ಮಾಡಿದರು.
ಸಭೆಗೆ ಭಾಗಿಯಾದವರ ಪಟ್ಟಿ
ಶಾಸಕರು -ಜಿ ಟಿ ದೇವೌಗೌಡ, ಹೆಚ್.ಡಿ ರೇವಣ್ಣ, ಕರೆಮ್ಮ ಜಿ ನಾಯಕ, ಹರೀಶ್ ಗೌಡ, ಸುರೇಶ್ ಬಾಬು, ಸಮೃದ್ಧಿ ಮಂಜುನಾಥ್, ವೆಂಕಟಶಿವಾರೆಡ್ಡಿ, ಶಾರದ ಪಿ ನಾಯ್ಕ್, ಎಚ್ ಟಿ ಮಂಜುನಾಥ್, ಸ್ವರೂಪ್, ನೇಮಿರಾಜು ನಾಯಕ್, ಎಂ.ಟಿ.ಕೃಷ್ಣಪ್ಪ, ಸೂರಜ್ ನಾಯಕ್, ಭೀಮಾಗೌಡ ಬಸವನಗೌಡ ಪಾಟೀಲ್, ಶಿಢ್ಲಘಟ್ಟ ರವಿಕುಮಾರ್, ಶ್ರವಣಬೆಳಗೊಳ ಬಾಲಕೃಷ್ಣ, ಎ.ಮಂಜು, ಮಾಜಿ ಶಾಸಕರಾದ ಗೌರಿಶಂಕರ್, ಪುಟ್ಟರಾಜು, ಅನ್ನದಾನಿ, ಕೃಷ್ಣಾರೆಡ್ಡಿ, ವೈ ಎಸ್ ವಿ ದತ್ತಾ, ಬಂಡೆಪ್ಪ ಕಾಶೆಂಪುರ್, ಹೆಚ್.ಕೆ.ಕುಮಾರಸ್ವಾಮಿ ಭಾಗಿ. ಜೆಡಿಎಸ್ ಯುವಮುಖಂಡ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗಿ.
ಗೈರಾದವರು ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ ಇಬ್ರಾಹಿಂ, ಶಾಸಕ ಶರಣ್ ಗೌಡ ಕಂದಕೂರ್ ಹಾಗೂ ಹನೂರು ಶಾಸಕ ಮಂಜುನಾಥ್.