ಬಿಜೆಪಿ ನಾಯಕ ಭುನಿಯಾ ಹತ್ಯೆ ಪ್ರಕರಣ: NIA ಯಿಂದ TMC ಮುಖಂಡನ ಅರೆಸ್ಟ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಬಿಜೋಯಿ ಕೃಷ್ಣ ಭುನಿಯಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್(TMC)​ ಮುಖಂಡ ನಬಕುಮಾರ್​ ಮೊಂಡಾಲ್​ ಅವರನ್ನು ರಾಷ್ಟ್ರೀಯ ತನಿಖಾ ದಳ (NIA) ಬುಧವಾರ ಬಂಧಿಸಿದೆ.

ಈ ವರ್ಷದ ಎಪ್ರಿಲ್‌ನಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಜೇ ಸೇನ್‌ಗುಪ್ತಾ ಅವರ ಏಕಸದಸ್ಯ ಪೀಠವು ಭುನಿಯಾ ಹತ್ಯೆಗೆ ಎನ್‌ಐಎ ತನಿಖೆ ನಡೆಸುವಂತೆ ಆದೇಶಿಸಿತ್ತು.

ತನಿಖೆಗೆ ಇಳಿದ NIA ಮಿಡ್ನಾಪುರ ಜಿಲ್ಲೆಯ ಗೋರಾಮಹಲ್​ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದೆ.

2023 ಮೇ ತಿಂಗಳಲ್ಲಿ ಭುನಿಯಾ ಹತ್ಯೆ ಮಾಡಲಾಗಿತ್ತು. ಈ ಕೃತ್ಯ ಪಶ್ಚಿಮ ಬಂಗಾಳದ್ಯಂತ ರಾಜಕೀಯ ಮುಖಂಡರಲ್ಲಿ ಸಂಚಲನ ಸೃಷ್ಠಿಸಿತ್ತು. ಆರಂಭದಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜಶೇಖರ್ ಮಂಥ ಅವರ ಏಕಸದಸ್ಯ ಪೀಠವು ಈ ವಿಷಯದಲ್ಲಿ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಮಟ್ಟದ ತನಿಖೆಗೆ ಆದೇಶ ನೀಡಿತ್ತು. ತನಿಖೆಯನ್ನು ಸರಿಯಾಗಿ ಮಾಡಿಲ್ಲ. ದೋಷಾರೋಪ ಪಟ್ಟಿ(ಚಾರ್ಚ್​ಶೀಟ್​)ನಲ್ಲಿ ಹಲವರ ಹೆಸರು ಕೈ ಬಿಡಲಾಗಿದೆ ಎಂದು ರಾಜ್ಯ ಪೊಲೀಸರ ವಿರುದ್ಧದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಎನ್​ಐಎ ಗೆ ಹಸ್ತಾಂತರಿಸಲಾಯಿತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!