ಹಾಡಹಗಲೇ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಕತಿಯಾರ್ ಜಿಲ್ಲೆಯಲ್ಲಿ ಸಂಜೀವ್ ಮಿಶ್ರಾ ಎಂಬ ಬಿಜೆಪಿ ಮುಖಂಡನನ್ನು ಮನೆ ಮುಂದೆಯೇ ಸೋಮವಾರದಂದು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಇವರು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾಗಿದ್ದು, ಸೋಮವಾರ ತಮ್ಮ ಮನೆಯ ಮುಂದೆ ಕುಳಿತಿರುವಾಗಲೇ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಇದರ ಪರಿಣಾಮ ಸಂಜೀವ್ ಮಿಶ್ರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಘಟನೆಗೆ ಹಳೆ ವೈಷಮ್ಯ ಹಾಗೂ ಆಸ್ತಿ ವಿವಾದ ಕಾರಣವೆಂದು ಪೊಲೀಸರು ಹೇಳಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಶಿವಸೇನಾ ನಾಯಕನನ್ನು ಪಂಜಾಬಿನ ಅಮೃತಸರದಲ್ಲಿ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆನ್ನಲ್ಲೇ ಇದೀಗ ಇಂಥವುದೇ ಘಟನೆ ನಡೆದಿದ್ದು, ಎಲ್ಲರನ್ನು ಬೆಚ್ಚಿಬೀಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!