ಹೊಸ ದಿಗಂತ ಡಿಜಿಟಲ್ ಡೆಸ್ಕ್
ಉತ್ತರಾಖಂಡದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. 70 ವಿಧಾನಸಭೆ ಸ್ಥಾನಗಳ ರಾಜ್ಯದಲ್ಲಿ 44 ಸೀಟುಗಳಲ್ಲಿ ಬಿಜೆಪಿ ಮುಂದಿರುವುದರಿಂದ ಉತ್ತರಾಖಂಡ ಬಿಜೆಪಿಗೆ ಒಲಿಯುವುದು ಸ್ಪಷ್ಟ.
ಇದೇಕೆ ದಾಖಲೆ ಗೊತ್ತೇ? 2000ನೇ ಇಸ್ವಿಯಲ್ಲಿ ಉತ್ತಾರಾಖಂಡ ಸ್ಥಾಪನೆಯಾದಾಗಿನಿಂದ ಯಾವ ಪಕ್ಷವೂ ನಿರಂತರ ಎರಡನೇ ಬಾರಿ ಅಧಿಕಾರ ಹಿಡಿದಿರಲಿಲ್ಲ. ಈ ಬಾರಿಯೂ ಚುನಾವಣೆಗೆ ಹೋಗುವ ಕೆಲವು ತಿಂಗಳುಗಳ ಮೊದಲು ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಬದಲಾಯಿಸಿತ್ತು. ರಾಜ್ಯದಲ್ಲಿ ಬಿಜೆಪಿಗೆ ಸೋಲಿನ ಭೀತಿ ಕಾಡಿದೆ ಎಂದೂ ಆ ಸಮಯದಲ್ಲಿ ವಿಶ್ಲೇಷಣೆಗಳಿದ್ದವು.
ಈ ಎಲ್ಲ ಆಡಳಿತ ವಿರೋಧಿ ಅಲೆಯ ಭೀತಿಯನ್ನು ಮೆಟ್ಟಿ ನಿಂತು ಉತ್ತರಾಖಂಡದಲ್ಲಿ ಬಿಜೆಪಿ ಹೊಸ ದಾಖಲೆ ಬರೆದಿದೆ.