ಉತ್ತರಪ್ರದೇಶದಲ್ಲಿ 10 ಸಾವಿರ ಖಾಲಿ ಮತಪತ್ರಗಳು ಪತ್ತೆ: ಸಮಾಜವಾದಿ ಪಕ್ಷ ಕಾರ್ಯಕರ್ತರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶದಲ್ಲಿ ವಾಹನವೊಂದರಲ್ಲಿ 10 ಸಾವಿರ ಖಾಲಿ ಮತಪತ್ರಗಳನ್ನು ಸಮಾಜವಾದಿ ಪಕ್ಷದ (ಎಸ್‌ ಪಿ) ಕಾರ್ಯಕರ್ತರು ವಶಪಡಿಸಿಕೊಂಡಿದ್ದಾರೆ. ಇದನ್ನು ವಿರೋಧಿಸಿ ಅಜಂಗಡ ಮತ್ತ ಮೊರಾದಾಬಾದ್‌ ನಲ್ಲಿ ಎಸ್‌ ಪಿ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದಾರೆ.
ಈ ಬಗ್ಗೆ ಸಮಾಜವಾದಿ ಪಕ್ಷ ಟ್ವೀಟ್‌ ಮಾಡಿದ್ದು, ಕಾರಿನ ಹೆಡ್‌ ಲೈಟ್‌ ಆಫ್‌ ಮಾಡಿಕೊಂಡು 10 ಸಾವಿರಕ್ಕೂ ಹೆಚ್ಚು ಖಾಲಿ ಮತಪತ್ರಗಳನ್ನು ಕೊಂಡೊಯ್ಯುವ ಪ್ರಯತ್ನ ಮಾಡಲಾಗಿತ್ತು ಎಂದಿದೆ.
ಎಸ್‌ ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಸೂಚನೆ ಮೇರೆಗೆ ಪಕ್ಷದ ಕಾರ್ಯಕರ್ತರು ಈ ಪ್ರಕರಣದ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದು ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅಜಂಗಡದ ಜಿಲ್ಲಾ ಚುನಾವಣಾಧಿಕಾರಿ ಅಮೃತ್‌ ತ್ರಿಪಾಟಿ, ಆ ವಾಹಸವು ಬ್ಲಾಕ್‌ ಅಭಿವೃದ್ಧಿ ಅಧಿಕಾರಿಯದ್ದಾಗಿದ್ದು, ವಶಪಡಿಸಿಕೊಂಡಿರುವ ಖಾಲಿ ಮತಪತ್ರಗಳು ಬಳಕೆಯಾಗದ ಅಂಚೆ ಮತಪತ್ರಗಳಾಗಿವೆ. ಅವುಗಳನ್ನು ಮತಪತ್ರದ ಜತೆಗೆ ಸಲ್ಲಿಸಬೇಕಾಗಿತ್ತು, ಆದರೆ ಬಿಡಿಒ ಅವರ ನಿರ್ಲಕ್ಷ್ಯದಿಂದ ಅದನ್ನು ಸಲ್ಲಿಸಿರಲಿಲ್ಲ. ಅದು ಕೇವಲ ಕಾಗದ ಅಷ್ಟೆ.
ತಪ್ಪಿತಸ್ಥ ಅಧಿಕಾರಿಯ ಅಮಾನತಿಗೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!