ಗುಜರಾತ್ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆಯೇ ಅಮೋಘ ಗೆಲುವು ಕಂಡ ಬಿಜೆಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ದಾಖಲೆಯ 7 ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಅಮೋಘ ಗೆಲುವಿನ ಹಿಂದೆ ಭಾರತೀಯ ಜನತಾ ಪಕ್ಷ ಕೈಗೊಂಡ ಕೆಲವು ದಿಟ್ಟ ನಿರ್ಧಾರಗಳೂ ಕೆಲಸ ಮಾಡಿವೆ. ಬಹುಪಾಲು ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದ ಬಿಜೆಪಿ ಅದಕ್ಕೆ ತಕ್ಕ ಫಲ ಪಡೆದಿದೆ. ಅದರಲ್ಲಿಯೂ ಪಕ್ಷವು ಪಕ್ಷವು ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಒಬ್ಬರೇ ಒಬ್ಬ ಮುಸಲ್ಮಾನರನ್ನೂ ಕಣಕ್ಕಿಳಿಸದಿದ್ದರೂ ಸಿಕ್ಕ ಫಲಿತಾಂಶ ಅಮೋಘವಾಗಿದೆ.
ಗುಜರಾತ್‌ನಲ್ಲಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ 17 ಸ್ಥಾನಗಳಲ್ಲಿ 12 ರಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್‌ ಕೇವಲ 5 ಸ್ಥಾನಗಳನ್ನಷ್ಟೇ ಗೆದ್ದು ಮುಖಭಂಗಕ್ಕೆ ಒಳಗಾಗಿದೆ.  ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಇಲ್ಲಿ ಆರು ಸ್ಥಾನಗಳ ಹೆಚ್ಚಳ ಕಂಡಿದೆ.
ಐತಿಹಾಸಿಕವಾಗಿ ಈ ಕ್ಷೇತ್ರಗಳು ಕಾಂಗ್ರೆಸ್‌ಗೆ ಮತ ಹಾಕಿದ ಇತಿಹಾಸ ಹೊಂದಿವೆ. ಆದರೂ ಈ ಬಾರಿ ಅವರು ಕಾಂಗ್ರೆಸ್‌ ಕೈಬಿಟ್ಟಿವೆ. ಉದಾಹರಣೆಗೆ, ಕಾಂಗ್ರೆಸ್ 10 ವರ್ಷಗಳ ಕಾಲ ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರವಾದ ದರಿಯಾಪುರದಲ್ಲಿ ಕಾಂಗ್ರೆಸ್ ಶಾಸಕ ಗ್ಯಾಸುದ್ದೀನ್ ಶೇಖ್ ಬಿಜೆಪಿ ಅಭ್ಯರ್ಥಿ ಕೌಸಿಕ್ ಜೈನ್ ವಿರುದ್ಧ ಸೋತಿದ್ದಾರೆ.
ಆಮ್ ಆದ್ಮಿ ಪಕ್ಷವು (ಎಎಪಿ) ತಾನು ಸ್ಪರ್ಧಿಸಿದ 16 ಮುಸ್ಲಿಂ ಪ್ರಾಬಲ್ಯವಿರುವ ಯಾವುದೇ ಸ್ಥಾನಗಳಲ್ಲಿ ಗೆಲ್ಲಲು ವಿಫಲವಾಗಿದೆ. ಒವೈಸಿಯ ಎಐಎಂಐಎಂ ಸಹ ಮುಸ್ಲಿಮರ ಸಾಂಪ್ರದಾಯಿಕ ಮತಗಳನ್ನು ವಿಭಜಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ.
ಜಮಾಲ್‌ಪುರ-ಖಾಡಿಯಾದಲ್ಲಿ ಕಾಂಗ್ರೆಸ್‌ನ ಇಮ್ರಾನ್ ಖೇದವಾಲಾ ಸೋಲನುಭವಿಸಿದ್ದರು. ವಡ್ಗಾಮ್‌ನಲ್ಲಿ ಜಿಗ್ನೇಶ್ ಮೇವಾನಿ ಅಲ್ಪ ಮತಗಳ ಅಂತರದಿಂದ ಹಿನ್ನಡೆಯಲ್ಲಿದ್ದರು. ಗುಜರಾತ್‌ನಲ್ಲಿ ತನ್ನನ್ನು ಬೆಂಬಲಿಸುವ ಮುಸ್ಲಿಂ ಮತದಾರರೊಂದಿಗೆ ನಿಂತಿದ್ದ ಕಾಂಗ್ರೆಸ್, ಬಿಲ್ಕಿಸ್ ಬಾನೋ ಪ್ರಕರಣದಲ್ಲಿ 11 ಅಪರಾಧಿಗಳನ್ನು ಶೀಘ್ರ ಬಿಡುಗಡೆ ಮಾಡಿರುವುದನ್ನು ತೀವ್ರವಾಗಿ ಪ್ರತಿಭಟಿಸಿತು. ಆದರೆ ಮತದಾರ ಮಾತ್ರ ಕಾಂಗ್ರೆಸ್‌ ನ ಇಂತಹ ಹೋರಾಟಗಳಿಗೆ ಸೊಪ್ಪು ಹಾಕಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!