Monday, January 30, 2023

Latest Posts

ಹಾವು ಉಳಿಸಲು ಸಡನ್ ಬ್ರೇಕ್‌ ಹಾಕಿದ ಟ್ರಕ್ ಚಾಲಕ.. ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಸ್ತೆಯ ಮೇಲೆ ಹರಿಯುತ್ತಿದ್ದ ಹಾವಿನ ಜೀವ ಕಾಪಾಡಲು ಕಂಟೈನರ್ ಟ್ರಕ್ ಚಾಲಕ ರಸ್ತೆಯ ಮಧ್ಯದಲ್ಲಿ ಏಕಾಏಕಿ ವಾಹನವನ್ನು ನಿಲ್ಲಿಸಿದ ಪರಿಣಾಮ ಐದು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಪ್ರದೇಶದ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಚಾಲಕ ಸಡನ್‌ ಬ್ರೇಕ್‌ ಹಾಕಿದ್ದರಿಂದ ಹಿಂಬದಿಯಿಂದ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಟಾಟಾ ಏಸ್, ಟಿಪ್ಪರ್ ಮತ್ತು ಬಂಡೆಗಳನ್ನು ಸಾಗಿಸುತ್ತಿದ್ದ ಮತ್ತೊಂದು ಮಿನಿ ಟಿಪ್ಪರ್ ಪರಸ್ಪರ ಡಿಕ್ಕಿಯಾಗಿವೆ.
ಕಂಟೈನರ್ ಟ್ರಕ್‌ನ ಚಕ್ರಕ್ಕೆ ಹಾವು ಸಿಲುಕಿದರೂ, ಜೀವಾಪಾಯವಿಲ್ಲದೆ ಹೆದ್ದಾರಿ ಪಕ್ಕದ ಪೊದೆಗಳತ್ತ ಹೋಗುವಲ್ಲಿ ಯಶಸ್ವಿಯಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಸಿಕ್ಕಿಬಿದ್ದ ಹಲವು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!