ಮಗಳು ನನ್ನ ಎದೆಗೆ ಚೂರಿ ಇರಿದಂತಾಗಿದೆ: ಡಾ..ರಾಜನಂದಿನಿ ಬಿಜೆಪಿ ಸೇರ್ಪಡೆಗೆ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಬೇಸರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ (BJP) ಗೆ ಮಗಳು ಸೇರಿದ್ದು ನನ್ನ ಎದೆಗೆ ಚೂರಿ ಇರಿದಂತಾಗಿದೆ. ಆಕೆ ಈ ರೀತಿ ಮಾಡುತ್ತಾಳೆ ಎಂದು ನಾನು ಕನಸಿನಲ್ಲಿಯೂ ಆಲೋಚನೆ ಮಾಡಿರಲಿಲ್ಲ. ಮಗಳು ಈ ರೀತಿ ಇದ್ದಾಳೆ ಎನ್ನುವುದು ನನ್ನ ದೌರ್ಭಾಗ್ಯ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ (Kagodu Thimmappa) ಹೇಳಿದ್ದಾರೆ.

ಶಿವಮೊಗ್ಗದ ಸಾಗರದಲ್ಲಿ (Sagara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರಿ ಡಾ.ರಾಜನಂದಿನಿ (Dr.Rajanandini) ಬಿಜೆಪಿ ಸೇರ್ಪಡೆ ವಿಚಾರವಾಗಿ ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ನನಗೆ ಈಗಷ್ಟೇ ಗೊತ್ತಾಗಿದೆ. ಈ ರೀತಿ ಮಾಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಆಲೋಚಿಸಿರಲಿಲ್ಲ. ನಾನು ರಾಜಕಾರಣದಲ್ಲಿ (Politics) ಸ್ಥಿರತೆ ಮತ್ತು ಬದ್ಧತೆ ಉಳಿಸಿಕೊಂಡು ಬಂದವನು. ನಾವು ಅದನ್ನೇ ಅನುಸರಿಸಿಕೊಂಡು ಕಾರ್ಯರೂಪಕ್ಕೆ ತರುತ್ತಿದ್ದೇವೆ. ಆ ಸಂತೋಷ ಮತ್ತು ನೆಮ್ಮದಿ ನಮಗಿದೆ ಎಂದರು.

ನಾನು ಕಾಂಗ್ರೆಸ್ (Congress) ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಪರವಾಗಿ ನಿಲ್ಲುತ್ತೇನೆ ಹಾಗೂ ಅದರ ಪರವಾಗಿ ಕೆಲಸ ಮಾಡುತ್ತೇನೆ. ಮಗಳಿಗೆ ಯಾರೋ ಹಿಂದಿನಿಂದ ಈ ರೀತಿ ಮಾಡಿಸಿದ್ದಾರೆ. ಅದು ಹಾಲಪ್ಪ ಇರಬಹುದು. ಅವಳನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಅವಳು ತನ್ನ ಬಳಿ ಯಾವುದೇ ಬೇಸರ ಹೇಳಿಕೊಂಡಿಲ್ಲ. ನಾನು ಅವಳನ್ನು ಖರ್ಗೆ (Mallikarjun Kharge) ಹತ್ತಿರ ಕರೆದುಕೊಂಡು ಹೋಗಿದ್ದೆ. ಅವಕಾಶ ಇದ್ದರೆ ನೋಡೋಣ ಎಂದಿದ್ದರು. ಕಾಂಗ್ರೆಸ್‌ನಲ್ಲಿಯೇ ಇದ್ದು ರಾಜಕೀಯವಾಗಿ ಬೆಳೆಯಬಹುದಾಗಿತ್ತು. ನನ್ನ ಹತ್ತಿರ ಯಾವುದನ್ನೂ ಹೇಳಿಕೊಂಡಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!