2023ರಲ್ಲೂ ಬಿಜೆಪಿ ಅಧಿಕಾರಕ್ಕೆ: ಯತ್ನಾಳ್ ಭವಿಷ್ಯ

ಹೊಸದಿಗಂತ ವರದಿ, ಧಾರವಾಡ:

ದೇಶದಲ್ಲಿ ಸದ್ಯ ಪಂಚರಾಜ್ಯ ಚುನಾವಣೆಯು ನಡೆದಿದೆ. ಸ್ಥಾನ ಗೆಲ್ಲುವಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗಲಿದ್ದು, ಮುಂದೆ ಒಳ್ಳೆಯ ದಿನಗಳು ಬರಲಿವೆ. ಕರ್ನಾಟಕದಲ್ಲಿ ನೂತನ ಶಕ್ತಿಯೊಂದಿಗೆ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಂದು ಶಾಸಕ ಬಸವರಾಜ ಪಾಟೀಲ ಯತ್ನಾಳ್ ಭವಿಷ್ಯ ನುಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನೂ ರಾಜಕೀಯ ಜ್ಯೋತಿಷಿ ಅಲ್ಲ. ಆದರೆ, ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ನಿಜವಾಗುತ್ತಿದೆ. ನಾನಂತೂ ಯಾವುದೇ ಅಪೇಕ್ಷೇ ಮಾಡಿಲ್ಲ. ಆದಾಗ್ಯೂ ನಮ್ಮನ್ನೂ ಸೇರಿಯೆ ಒಳ್ಳೆಯ ದಿನ ಬರಲಿದೆ ಬರಲಿವೆ ಎಂದು ಹೇಳಿದರು.
ಯೋಗ್ಯತೆ ಯಾರಿಗಿದೆ?
ಯತ್ನಾಳ್ ಅವರಿಗೆ ಮುಖ್ಯಮಂತ್ರಿ ಸ್ಥಾನದ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನಷ್ಟು ಯೋಗ್ಯತೆ ಹಾಗೂ ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ?. ವಾಜಪೇಯಿ ಸರ್ಕಾರದಲ್ಲಿ ಸಚಿವನಾಗಿದ್ದ ವೇಳೆ ಕ್ರೀಯಾಶೀಲ ಕೆಲಸ ಮಾಡಿದ್ದಕ್ಕೆ ವಾಜಪೇಯಿ ಪ್ರಶಂಸನಾ ಪತ್ರ ಕೊಟ್ಟಿದ್ದಾಗಿ ಹೇಳಿದರು.
ಚಮಚಾಗಿರಿಗೆ ಮಣೆ:
ಅಟಲ್‌ಜೀ ಹಸ್ತಾಂಕ್ಷರದಿoದ ಪತ್ರ ಪಡೆದ ವ್ಯಕ್ತಿ ನಾನು. ಆದರೆ ದುರ್ದೈವ ಅಂದ್ರೆ ರಾಜಕಾರಣದಲ್ಲಿ ನೇರ ಮಾತನಾಡಬಾರದು. ಚಮಚಾಗಿರಿ ಮಾಡುವವರಿಗೆ ಮಣೆ ಹಾಕುತ್ತಾರೆ. ಇದು ನನಗಂತೂ ಬರುವುದಿಲ್ಲ. ಕಾಲು ಹಿಡಿಯುವುದಿಲ್ಲ. ಭೋಗದ ವಸ್ತು ಕೊಡಲ್ಲ. ಅದಕ್ಕಾಗಿ ಹಿಂದೆ ಉಳಿದ್ದಾಗಿ ತಿಳಿಸಿದರು.
ಸಾಮಾನ್ಯ ಕಾರ್ಯಕರ್ತ:
ಓರ್ವ ಸಾಮಾನ್ಯ ಕಾರ್ಯಕರ್ತರ ನಾನು. ಸಚಿವಗಿರಿ, ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಗುಡುಗಿಲ್ಲ. ಅತೀವೃಷ್ಠಿ ಸಂಬAಧ, ಸಾಮಾಜಿಕ ನ್ಯಾಯಕ್ಕೆ ಗುಡುಗಿದ್ದೇನೆ. ತುಚ್ಛ ಅಲ್ಲ, ಸ್ವಚ್ಛ ಮನಸ್ಸಿನಿಂದ ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆ ಮಾಡಿದ ತೃಪ್ತಿ ನನಗಿದೆ. ಯಾರ ಪ್ರಮಾಣ ಪತ್ರವೂ ಬೇಡ ಎಂದರು.
೨೦೨೩ರ ವಿಧಾನ ಭೆ ಚುನಾವಣೆ ಯಾರ ನೇತೃತ್ವದಲ್ಲಿ ಹೈಕಮಾಂಡ್ ಮಾಡುತ್ತಿದೆ ಎಂಬ ಬಗ್ಗೆ ಪಕ್ಷದ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಏನೇ ನಿರ್ಣಯ ಮಾಡಿದಲ್ಲಿ ಅದಕ್ಕೆ ನಾವು ಬದ್ಧ. ಕರ್ನಾಟಕದಲ್ಲಿ ನೂತನ ಶಕ್ತಿಯೊಂದಿಗೆ 2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಪುನರುಚ್ಚರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!