ರೆಸಿಪಿ: ಪಾಲಕ್ ರೈಸ್
ಸಮಯ: ಅರ್ಧ ಗಂಟೆ
ಸಾಮಾಗ್ರಿಗಳು
ಪಾಲಕ್ ಸೊಪ್ಪು
ಕೊತ್ತಂಬರಿ
ಈರುಳ್ಳಿ
ಬಟಾಣಿ
ಟೊಮ್ಯಾಟೊ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸು
ಗರಂ ಮಸಾಲಾ
ಚಕ್ಕೆ
ಲವಂಗ
ಏಲಕ್ಕಿ
ಪಲಾವ್ ಎಲೆ
ಮಾಡುವ ವಿಧಾನ
ಮೊದಲು ಸೊಪ್ಪನ್ನು 10 ನಿಮಿಷ ಬೇಯಿಸಿ.
ಇತ್ತ ಕುಕ್ಕರ್‌ಗೆ ಎಣ್ಣೆ, ಸಾಸಿವೆ ಹಾಕಿ.
ನಂತರ ಚಕ್ಕೆ,ಲವಂಗ ಹಾಗೂ ಪಲಾವ್ ಎಲೆ ಹಾಕಿ.
ನಂತರ ಇದಕ್ಕೆ ಹಸಿಮೆಣಸು, ಈರುಳ್ಳಿ ಹಾಕಿ.
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
ನಂತರ ಇದಕ್ಕೆ ಬಟಾಣಿ, ಟೊಮ್ಯಾಟೊ ಹಾಕಿ.
ನಂತರ ಇತ್ತ ಬೆಂದ ಸೊಪ್ಪನ್ನು ತಣ್ಣಗೆ ಮಾಡಿ, ಮಿಕ್ಸಿ ಮಾಡಿ ಪೇಸ್ಟ್ ಮಾಡಿ.
ಈ ಪೇಸ್ಟ್‌ನ್ನು ಕುಕ್ಕರ್‌ಗೆ ಹಾಕಿ.
ಎಣ್ಣೆ ಬಿಡುವವರೆಗೂ ಬಾಡಿಸಿ.
ನಂತರ ಇದಕ್ಕೆ ಗರಂ ಮಸಾಲಾ ಹಾಕಿ.
ನಂತರ ಅಳತೆಗೆ ತಕ್ಕಷ್ಟು ಉಪ್ಪು ಹಾಕಿ.
ಅಕ್ಕಿ ಹಾಕಿ, ನಂತರ ನೀರು ಹಾಕಿ, ಮೇಲೆ ತುಪ್ಪ ಹಾಕಿ ಕುಕ್ಕರ್ ಮುಚ್ಚಿ.
ಸಣ್ಣ ಉರಿಯಲ್ಲಿ ಕಾಲು ಗಂಟೆ ಬೇಯಿಸಿ ಒಂದು ವಿಶಲ್ ಆದಮೇಲೆ ಆಫ್ ಮಾಡಿ ಬಿಸಿ ಬಿಸಿ ಪಾಲಕ್ ಪಲಾವ್ ತಿನ್ನಬಹುದು.