ಬಂಗಾಳದಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿ ಯತ್ನ: ಮಮತಾ ಬ್ಯಾನರ್ಜಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಶ್ರೀರಾಮ ಗಲಭೆ, ಹಿಂಸಾಚಾರವನ್ನು ಹೇಳಿಲ್ಲ. ಆದರೆ ಬಿಜೆಪಿ ಮಾಡುತ್ತಿದೆ. ಇದೀಗ ರಾಷ್ಟ್ರೀಯ ತನಿಖಾ ದಳವನ್ನು ಬಂಗಾಳಕ್ಕೆ ಕಳುಹಿಸಿ ಗಲಭೆ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.

ಎಪ್ರಿಲ್ 19ಕ್ಕೆ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕೂ ಎರಡೂ ದಿನ ಮೊದಲು ಅಂದರೆ ಏಪ್ರಿಲ್ 17ರಂದು ಬಿಜೆಪಿ ಹಿಂಸಾಚರ ಸೃಷ್ಟಿಸಲಿದೆ. ಈ ಮೂಲಕ ಭಾರಿ ಷಡ್ಯಂತ್ರಕ್ಕೆ ಬಿಜೆಪಿ ಪ್ಲಾನ್ ಮಾಡಿದೆ ಎಂದು ಮಮತಾ ಹೇಳಿದ್ದಾರೆ

2022ರ ಬಾಂಬ್ ಸ್ಫೋಟದ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಪೂರ್ವ ಮಿಡ್ನಾಪುರ್ ವಲಯಕ್ಕೆ ದಾಳಿ ಮಾಡಿದ್ದರು. ಟಿಎಂಸಿ ನಾಯಕನ ಮನೆ ಮೇಲೆ ರೇಡ್‌ಗೆ ಮುಂದಾದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಷ್ಟೇ ಅಲ್ಲ ಎನ್ಐಎ ಅಧಿಕಾರಿಗಳ ಮೇಲೆ ಮಹಿಳಾ ಕಿರುಕುಳ ಪ್ರಕರಣ ಕೂಡ ದಾಖಲಾಗಿದೆ. ಈ ಘಟನೆ ಉಲ್ಲೇಖಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಗಲಭೆ ಸೃಷ್ಟಿಸುತ್ತಿದೆ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆಗೆ ಕೆಲ ದಿನಗಳಿರುವಾಗಲೇ ಗಲಭೆ ಸೃಷ್ಟಿಸುತ್ತಿದೆ. ಈ ಮೂಲಕ ಜನರಲ್ಲಿ ಭಯದ ವಾತಾವಣರ ಸೃಷ್ಟಿ ಮಾಡುತ್ತಿದೆ. ಜೊತೆಗೆ ಬಿಜೆಪಿ ಅಕ್ರಮವಾಗಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!