ರಾಮ ನವಮಿ ಸಂಭ್ರಮ: ಅಯೋಧ್ಯೆಗೆ ಬರಬೇಡಿ ಎಂದ ಪೇಜಾವರ ಶ್ರೀ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಶ್ರೀ ರಾಮ ನವಮಿಯಂದು ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಲಕ್ಷಣವಿದ್ದು, ಹೀಗಾಗಿ ಆ ದಿನ ಯಾರು ಬರಬೇಡಿ ಎಂದು ಭಕ್ತರಲ್ಲಿ ಪೇಜಾವರ ಶ್ರೀಗಳು ಮನವಿ ಮಾಡಿದ್ದಾರೆ.

ರಾಮ ನವಮಿ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಕೋಟ್ಯಂತರ ಭಕ್ತರು ಆಗಮಿಸುವುದರಿಂದ ಜನದಟ್ಟಣೆ ಹೆಚ್ಚಾಗಲಿದೆ. ಹೀಗಾಗಿ ತಮ್ಮ ತಮ್ಮ ಊರುಗಳಲ್ಲೇ ಭಕ್ತರು ರಾಮ ನವಮಿ ಆಚರಿಸಬೇಕು ಎಂದು ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.

ರಾಮ ನವಮಿಗೆ ಅಯೋಧ್ಯೆಗೆ ಭಕ್ತರು ಬಂದಲ್ಲಿ ದರುಶನಕ್ಕೆ ತೊಂದರೆಯಾಗಲಿದೆ. ಹೀಗಾಗಿ ತಮ್ಮ ಊರಿನ ಮಂದಿರ, ಮನೆಗಳಲ್ಲೇ ರಾಮ ನವಮಿ ಆಚರಿಸಿ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.

ಈಗಲೇ ಪ್ರತಿ ಗಂಟೆಗೆ 15 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ನಿತ್ಯ ಲಕ್ಷಾಂತರ ಭಕ್ತರು ದರುಶನ ಪಡೆಯುತ್ತಾರೆ. ರಾಮನವಮಿಗೆ ಮತ್ತಷ್ಟು ಭಕ್ತರು ಆಗಮಿಸಿದಲ್ಲಿ ತೊಂದರೆ ಉಂಟಾಗಲಿದೆ. ಅದ್ದರಿಂದ ನಿಮ್ಮ ಊರುಗಳು, ಮಂದಿರಗಳಲ್ಲೆ ರಾಮ ನವಮಿ ಆಚರಿಸಿ ಎಂದು ಪೇಜಾವರ ಶ್ರೀಗಳು ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!