Tuesday, March 28, 2023

Latest Posts

ಅರ್ಧಕ್ಕೇ ರದ್ದಾಯ್ತು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಇದಕ್ಕೆ ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ನಾಯಕರ ನಡುವಿನ ಕೋಲ್ಡ್‌ವಾರ್ ಸಾರ್ವಜನಿಕವಾಗಿಯೇ ಬಹಿರಂಗಗೊಂಡಿದ್ದು, ಸೋಮವಾರ ನಡೆದ
ವಿಜಯಸಂಕಲ್ಪ ಯಾತ್ರೆ ಅರ್ಧಕ್ಕೇ ಮೊಟಕುಗೊಳಿಸಲಾಗಿದೆ. ಗೋವಿಂದರಾಜನಗರದಲ್ಲಿ ವಿಜಯಸಂಕಲ್ಪ ಯಾತ್ರೆ ಹಠಾತ್ತನೆ ರದ್ದಾಗಿದ್ದು, ಆರ್.ಅಶೋಕ್ ಮತ್ತು ವಿ. ಸೋಮಣ್ಣ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ.

ನಾಯಂಡಳ್ಳಿವರೆಗೆ ವಿಜಯ ಸಂಕಲ್ಪ ಯಾತ್ರೆ ಆಯೋಜಿಸಲಾಗಿತ್ತು. ಇದರಲ್ಲಿ ಬಿಜೆಪಿ ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೂಡ ಭಾಗಿಯಾಗಿದ್ದರು. ಈ ವೇಳೆ ಮಾತಿನ ಚಕಮಕಿಯಾಗಿದ್ದು, ಧರ್ಮೇಂದ್ರ ಅವರು ನಾಗರಬಾವಿಯಲ್ಲಿ ಯಾತ್ರೆಯ ಬಸ್ ಇಳಿದಿದ್ದಾರೆ.

ನಂತರ ಅಶೋಕ್ ಅವರು ರಥಯಾತ್ರೆಯಿಂದ ಇಳಿದಿದ್ದಾರೆ. ಇನ್ನಷ್ಟು ದೂರ ಬರುವಂತೆ ಆರ್.ಅಶೋಕ್ ಅವರಿಗೆ ಸೋಮಣ್ಣ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಅಶೋಕ್ ಯಾತ್ರೆ ಬಿಟ್ಟು ಹೋಗಿದ್ದಾರೆ. ಇದರಿಂದ ಸಿಟ್ಟಾದ ಸೋಮಣ್ಣ ಅವರು ರಥಯಾತ್ರೆ ತ್ಯಜಿಸಿ ಕಾರ್‌ನಲ್ಲಿ ಹೊರಟಿದ್ದು, ಈ ಎಲ್ಲ ಬೆಳವಣಿಗೆಗಳು ಕಾರ್ಯಕರ್ತರನ್ನು ತಬ್ಬಿಬ್ಬಾಗುವಂತೆ ಮಾಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!