Friday, March 31, 2023

Latest Posts

ಬಿಜೆಪಿ ವಿಜಯ ಸಂಕಲ್ಪ‌ ಯಾತ್ರೆ : ಕಿತ್ತೂರಿನಲ್ಲಿ ಇಂದು ಬೈಕ್‌ ರ್ಯಾಲಿ, ರೋಡ್ ಶೋ ಗೆ ಕ್ಷಣಗಣನೆ

ಹೊಸದಿಗಂತ ವರದಿ ಕಿತ್ತೂರು :

ಬಿಜೆಪಿ ವಿಜಯ ಸಂಕಲ್ಪ‌ ಯಾತ್ರೆ ಅಂಗವಾಗಿ ವೀರರಾಣಿ ಕಿತ್ತೂರ ಚನ್ನಮ್ಮ ಊರಿನಲ್ಲಿ ಏರ್ಪಡಿಸಿದ್ದ ಬೈಕ್‌ ರ್ಯಾಲಿ ಹಾಗೂ ರೋಡ್ ಶೋ ಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯ ರಸ್ತೆಯಲ್ಲಿರುವ ರಾಣಿಚನ್ನಮ್ಮ ವೃತ್ತದಿಂದ 1.5 ಕಿ.ಮೀ. ವರೆಗೆ ರೋಡ್ ಶೋ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು, ಸಚಿವ ಗೋವಿಂದ ಕಾರಜೋಳ ಭಾಗವಹಿಸಲಿದ್ದಾರೆ.

ಈಗಾಗಲೇ ಚನ್ನಮ್ಮನ ಕಿತ್ತೂರ ಕೇಸರಿ ಮಯವಾಗಿದ್ದು, ನೂರಾರು ಕಾರ್ಯಕರ್ತರು ನಗರದಾದ್ಯಂತ ಭರ್ಜರಿ ಬೈಕ್ ರ್ಯಾಲಿ ನಡೆಯುತ್ತಿದೆ. ಡೋಳ್ಳು ಕುಣಿತ, ಸಕಲ ವಾದ್ಯ ಮೇಳದೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಕಿತ್ತೂರ ರಾಣಿ ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋ ಗೆ ಚಾಲನೆ ನೀಡಲಿದ್ದಾರೆ. ರೋಡ್ ಶೋ ನಡೆಯುವ ಮಾರ್ಗಯೂದ್ದಕ್ಕೂ ಹಾಗೂ ರಸ್ತೆ ಸುತ್ತಮುತ್ತ ಇಕ್ಕಲಲ್ಲಿ ಜನ ಬಂದು ಸೇರಿದ್ದಾರೆ. ಬಿಜೆಪಿ ಕಾರ್ಯಕರ್ತರು ತಮ್ಮ ರಾಷ್ಟ್ರ ಹಾಗೂ ರಾಜ್ಯ ನಾಯಕರ ಅದ್ದೂರಿಯಾಗಿ ಸ್ವಾಗತಿಸಲು ತುಂದಿಗಾಲಲ್ಲಿ ನಿಂತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!