ರಾಜ್ಯದಲ್ಲಿ ಬಿಜೆಪಿಗೆ 130 ರಿಂದ 140 ಸೀಟ್ ಬರುತ್ತವೆ: ಶಾಸಕ ಯತ್ನಾಳ

ಹೊಸದಿಗಂತ ವರದಿ ವಿಜಯಪುರ:

ರಾಜ್ಯದಲ್ಲಿ ಬಿಜೆಪಿಗೆ 130 ರಿಂದ 140 ಸೀಟ್ ಬರುತ್ತವೆ.‌ ನಾನು ಸಿಎಂ ಆಕಾಂಕ್ಷಿ ಅಲ್ಲ. ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾನು ಬದ್ಧ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ 61ರ ಮತಗಟ್ಟೆಯಲ್ಲಿ ಕುಟುಂಬ ಸಮೇತ ಮತದಾನ ಮಾಡಿ ಮಾತನಾಡಿದ ಅವರು, ನಾನು ಮತದಾನ ಮಾಡಿದ್ದೇನೆ, ಎಲ್ಲರು ಮತದಾನ ಮಾಡಿ ಎಂದು ಮನವಿ ಮಾಡಿದರು.

ನಗರದಲ್ಲಿ ರೌಡಿಶೀಟರ್ ಹೈದರ್ ಅಲಿ ಹತ್ಯೆ ಪ್ರಕರಣದ ಆರೋಪಿಗಳನ್ನು ತಕ್ಷಣವೇ ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌‌ನವರೆ ರೌಡಿಶೀಟರ್‌ನ್ನು ಕೊಲೆ ಮಾಡಿದ್ದಾರೆ. ಅಲ್ಲದೇ, ಇಲ್ಲೊಬ್ಬ ಕ್ರಿಮಿನಲ್ ಮೌಲ್ವಿ ಇದ್ದಾನೆ. ಅವನ ಬಗ್ಗೆ ಸಾಕಷ್ಟು ಕ್ರಿಮಿನಲ್ ಆರೋಪಗಳಿವೆ. ಆತ ಪಾಕಿಸ್ತಾನ ಏಜೆಂಟ್ ಆಗಿದ್ದಾನೆ ಎಂದು ತನ್ವೀರಪೀರಾ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಇನ್ನು ಹತ್ಯೆಯಾದ ವ್ಯಕ್ತಿಯ ಪತ್ನಿ ದೂರು ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆ ಈ ಕೂಡಲೇ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಅಲ್ಲದೆ ಈಗೇನು ಕಾಶ್ಮೀರ ಫೈಲ್ಸ್, ಕೇರಳಾ ಸ್ಟೋರಿ, ಪಶ್ವಿಮ ಬಂಗಾಲ ಚಿತ್ರಗಳು ಬಂದಿವೆ.
ಅದೇ ರೀತಿ ವಿಜಯಪುರವನ್ನು ಪಾಕಿಸ್ತಾನ ಮಾಡಬೇಕು ಅಂತಾ ಇದೆ. ಲವ್ ಜಿಹಾದ್ ಮಾಡಬೇಕು ಅಂದುಕೊಂಡಿದ್ದಾರೆ. ಈಗಾಗಲೆ ಮತಾಂತರ ಮಾಡ್ತೆನೆ ಅಂತಾ ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾನೆ.‌ ಇದನ್ನ‌ ಅರಿತು ಹಿಂದುಗಳು ಜಾಗೃತರಾಗಬೇಕು. ಸರಿಯಾಗಿ ಬುದ್ದಿ ಕಲಿಸುವಂತಾಗಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!