ಹಿಮಾಚಲ ಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹಿಮಾಚಲ ಪ್ರದೇಶದ (Himachal Pradesh) ಒಂದು ರಾಜ್ಯಸಭೆ (Rajya Sabha) ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ (BJP) ಜಯಗಳಿಸಿದೆ. ಕಾಂಗ್ರೆಸ್ಸಿನ ಅಭಿಷೇಕ್ ಮನು ಸಿಂಘ್ವಿ (Abhishek Manu Singhvi ) ಸೋಲನುಭವಿಸಿದ್ದಾರೆ.

6 ಮಂದಿ ಕಾಂಗ್ರೆಸ್‌ ಶಾಸಕರು ಅಡ್ಡಮತದಾನ ಮಾಡಿದ್ದರಿಂದ ಬಿಜೆಪಿಯ ಹರ್ಷ ಮಹಜನ್ ಗೆಲುವು ಕಂಡಿದ್ದಾರೆ.

68 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ 25 ಶಾಸಕರನ್ನು ಹೊಂದಿದ್ದರೂ, ಈ ರಾಜ್ಯದ ಏಕೈಕ ರಾಜ್ಯಸಭಾ ಸ್ಥಾನವನ್ನು ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದು ಕಾಂಗ್ರೆಸ್‌ ಸರ್ಕಾರದಲ್ಲಿ ಇರುವ ದೊಡ್ಡ ಮಟ್ಟದ ಅಸಮಾಧಾನವನ್ನೂ ಕೂಡ ಹೊರಹಾಕಿದೆ. ಈ ಸೋಲು ಕಾಂಗ್ರೆಸ್‌ ಪಾಲಿಗೆ ಬರೀ ಸೋಲು ಮಾತ್ರವಲ್ಲ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಅಸ್ತಿತ್ವಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಇದೀಗ ಇದರ ನಡುವೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡಿದೆ, ವಿಶ್ವಾಸಮತ ಯಾಚಿಸುವಂತೆ ಸಿಎಂ ಸುಕ್ಕುಗೆ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ (Jairam Thakur) ಆಗ್ರಹಿಸಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ, 68 ಸ್ಥಾನಗಳಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದರೆ ಬಿಜೆಪಿ 25 ಸ್ಥಾನ ಗೆದ್ದುಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!