ಹೊಸದಿಗಂತ ವರದಿ ಧಾರವಾಡ:
ಗ್ರಾಮದ ಜಾತ್ರೆಯಲ್ಲಿ ಪ್ರಸಾದ ವಿತರಣೆ ವಿಷಯಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಬಿಜೆಪಿ ಯುವ ಮುಖಂಡ ಪ್ರವೀಣ ಕಮ್ಮಾರ ಎಂಬ ಯುವಕನನ್ನು ಹತ್ಯೆ ಮಾಡಿದ ಘಟನೆ ತಾಲೂಕಿನ ಕೋಟೂರ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಗ್ರಾಮದ ಉಡಚಮ್ಮದೇವಿ ಜಾತ್ರೆಯಲ್ಲಿ ಪ್ರಸಾದ ವಿತರಣೆಗೆ ಎರಡು ಗುಂಪುಗಳ ಮಧ್ಯೆ ನಡೆದ ಜಗಳ, ಕೂಟೂರ ಗ್ರಾಪಂ ಉಪಾಧ್ಯಕ್ಷನಾಗಿದ್ದ ಪ್ರವೀಣ ಬಿಡಿಸಿದ್ದಾರೆ.
ಆದರೆ, ಕುಡಿದ ಅಮಲಿನಲ್ಲಿ ಜಗಳದ ಗುಂಪೊಂದು ಪ್ರವೀಣನಿಗೆ ಚಾಕುವಿನಿಂದ ಇರಿದಿದೆ. ತಕ್ಷಣ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಿಸದೇ ಬುಧವಾರ ಬೆಳಗಿನ ಜಾವ ಪ್ರವೀಣ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.