ಪ್ರಧಾನಿ ಭದ್ರತೆಯಲ್ಲಿ ಲೋಪ- ಇಂದು ಸಾಯಂಕಾಲ ದೇಶದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಯುವ ಮೋರ್ಚ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಪ್ರವಾಸದಲ್ಲಿ ಗಂಭೀರ ಭದ್ರತಾ ಲೋಪವಾಗಿರುವುದನ್ನು ಖಂಡಿಸಿ ಇಂದು ಸಂಜೆ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಯುವ ಮೋರ್ಚ ಪ್ರತಿಭಟನೆ ನಡೆಸಲಿದೆ.

ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ನಿನ್ನೆ ಪ್ರಧಾನಿ ಮೋದಿ ಅವರ ಪ್ರಾಣಕ್ಕೆ ಅಪಾಯ ತಂದಿದೆ. ಇದು ಪ್ರಧಾನಿ ಕಚೇರಿಯ ಮೇಲೆ ಮಾತ್ರ ಮಾಡಿದ ದಾಳಿಯಲ್ಲ, ಪ್ರಜಾಪ್ರಭುತ್ವದ ಮೇಲಾದ ದಾಳಿಯಾಗಿದೆ. ಈ ಅಪರಾಧ ಕೃತ್ಯವನ್ನು ಬಿಜೆಪಿ ಯುವ ಮೋರ್ಚ ಬಲವಾಗಿ ಖಂಡಿಸುತ್ತದೆ ಮತ್ತು ಇಂದು ಸಂಜೆ 6 ಗಂಟೆಗೆ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!