ಮಹಿಳಾ ಲೆಜೆಂಡರಿ ಬೌಲರ್‌ ʼಜೂಲನ್‌ ಗೋಸ್ವಾಮಿʼ ಬಯೋಪಿಕ್‌ ಸಿದ್ಧ: ಇಲ್ಲಿದೆ ಆಕೆಯ ಸಾಧನೆಯ ವಿವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ಕ್ರಿಕೆಟಿಗರು, ಮಹಾನ್‌ ಸಾಧಕರು, ಸೈನಿಕರ ಬಯೋಪಿಕ್‌ ಗಳು ಹೆಚ್ಚಾಗಿ ಜನರ ಮೆಚ್ಚುಗೆ ಪಡೆಯುತ್ತಿದೆ. ಇದೀಗ ಭಾರತದ ಮಹಿಳಾ ಕ್ರಿಕೆಟ್‌ ತಂಡದ ಲೆಜೆಂಡರಿ ಬೌಲರ್‌ ಜೂಲನ್‌ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ ತೆರೆಕಾಣಲಿದೆ. ಇದರಲ್ಲಿ ನಟಿ ಅನುಷ್ಕಾ ಶರ್ಮಾ ಕೂಡ ನಟಿಸಿದ್ದಾರೆ.
ಈ ಚಿತ್ರಕ್ಕೆ ಚಡ್ಕಾ ಎಕ್ಸ್‌ ಪ್ರೆಸ್‌ ಎಂದು ಹೆಸರಿಡಲಾಗಿದ್ದು, ಅನುಷ್ಕಾ ಶರ್ಮಾ ಬೌಲರ್‌ ಜೂಲನ್‌ ಗೋಸ್ವಾಮಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂದು ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿದ ಅನುಷ್ಕಾ ಶರ್ಮಾ, ಇದು ಅತ್ಯಂತ ವಿಶೇಷವಾದ ಚಿತ್ರ, ಯಾಕೆಂದರೆ ಇದು ಬಹುದೊಡ್ಡ ತ್ಯಾಗದ ಕಥೆಯಾಗಿದೆ. ಚಡ್ಕಾ ಎಕ್ಸ್‌ ಪ್ರೆಸ್‌ ಚಿತ್ರವು ಮಾಜಿ ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಜೂಲನ್‌ ಗೋಸ್ವಾಮಿ ಅವರ ಜೀವನ ಪ್ರೇರಿತವಾಗಿದೆ. ಇದು ಮಹಿಳಾ ಕ್ರಿಕೆಟ್ ಜಗತ್ತಿನ ಕಣ್ಣು ತೆರೆಸಲಿದೆ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ಪ್ರಾಸಿತ್‌ ರಾಯ್‌ ನಿರ್ದೇಶನ ಮಾಡುತ್ತಿದ್ದುಮ ಕ್ಲೀಸ್‌ ಸ್ಟೇಟ್‌ ಫಿಲಂಸ್‌ ನಿರ್ಮಾಣ ಮಾಡಲಿದೆ.

ಯಾರಿದು ಜೂಲನ್‌ ಗೋಸ್ವಾಮಿ? 

  • ಜೂಲನ್‌ ಗೋಸ್ವಾಮಿ ತಮ್ಮ 19ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳ ಮೂಲಕ ಕ್ರಿಕೆಟ್‌ ಅಂಗಳಕ್ಕೆ ಪದಾರ್ಪಣೆ ಮಾಡಿದರು.
  • 2008-2011ರವರೆಗೆ ಭಾರತೀಯ ಮಹಳಾ ಕ್ರಿಕೆಟ್‌ ತಂಡದ ನಾಯಕಿಯಾಗಿದ್ದರು.
  • 2007ರಲ್ಲಿ ಐಸಿಸಿ ಮಹಿಳಾ ವರ್ಷ ಮಹಿಳಾ ಆಟಗಾರ್ತಿ, 2011ರಲ್ಲಿ ಎಂ.ಎ.ಚಿದಂಬರಂ ಟ್ರೋಫಿ, 2016ರಲ್ಲಿ ಐಸಿಸಿ ಮಹಿಳಾ ಒಡಿಐ ನ ಬೌಲಿಂಗ್‌ ನಲ್ಲಿ ಮೊದಲ ಸ್ಥಾನ ಪಡೆದರು.
  • ಅಂತಾರಾಷ್ಟ್ರೀಯ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಗೋಸ್ವಾಮಿ.
  • 2010ರಲ್ಲಿ ಅರ್ಜುನ ಪ್ರಶಸ್ತಿ, 2012ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
  • 2017ರ ಮಹಿಳಾ ಕ್ರಿಕೆಟ್‌ ವಿಶ್ವ ಕಪ್‌ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು.
  • 2018ರಲ್ಲಿ ಅವರಿಗೆ ಗೌರವಾರ್ಥವಾಗಿ ಭಾರತೀಯ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.
  • 2018ರಲ್ಲಿ ಶ್ರೀಲಂಕಾ ವಿರುದ್ಧ 300ನೇ ಅಂತಾರಾಷ್ಟ್ರೀಯ ವಿಕೆಟ್‌ ಪಡೆದ ಖ್ಯಾತಿ ಜೂಲನ್‌ ಗೋಸ್ವಾಮಿಯವರದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!