ಪಾಕ್‌ನ ಮುರ್ರೆಯಲ್ಲಿ ಹಿಮಪಾತ: ತುರ್ತು ಪರಿಸ್ಥಿತಿ ಘೋಷಣೆ, ಮುರ್ರೆಗೆ ಪ್ರವಾಸಿಗರ ನಿರ್ಬಂಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಜನಪ್ರಿಯ ಪ್ರವಾಸಿ ತಾಣ ಮುರ್ರೆಗೆ ಪ್ರವಾಸಕ್ಕೆಂದು ಬಂದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುರ್ರೆಯಲ್ಲಿ ನಿನ್ನೆ ರಾತ್ರಯಿಡೀ ಹಿಮ ಸುರಿದಿದ್ದು,ಹಿಮಪಾತಕ್ಕೆ ಈಗಾಗಲೇ 22 ಮಂದಿ ಮೃತಪಟ್ಟಿದ್ದಾರೆ.

ಹಿಮಪಾತದ ನಡುವೆ ವಾಹನಗಳು ಸಿಲುಕಿಕೊಂಡಿದ್ದು, ಇದರಲ್ಲಿದ್ದ ಪ್ರವಾಸಿಗರು ಉಸಿರುಗಟ್ಟಿ ಮೃತಪಡುತ್ತಿದ್ದಾರೆ. ಹಿಮಪಾತದಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಅನುಭವಿಸುತ್ತಿರುವ ಕಷ್ಟ ಪರಿಗಣಿಸಿ ಅಲ್ಲಿನ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದೆ.

ಭಾರೀ ಹಿಮದ ಹೊದಿಕೆಯಲ್ಲಿ ಕಾರುಗಳು ಹೂತು ಹೋಗಿವೆ. ಬಿಡುವಿಲ್ಲದೆ ಹಿಮ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಮುರ್ರೆಯಿಂದ ಹೊರಹೋಗುವ ಎಲ್ಲ ರಸ್ತೆಗಳೂ ಹಿಮದಿಂದ ಬಂದ್ ಆಗಿದ್ದು, ಪ್ರವಾಸಿಗರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಸದ್ಯಕ್ಕೆ ಮುರ್ರೆಗೆ ಪ್ರವೇಶಿಸದಂತೆ ಪ್ರಯಾಣಿಕರಿಗೆ ನಿಷೇಧ ಹೇರಲಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಮುರ್ರೆಯಲ್ಲಿ ಸಿಲುಕಿದ್ದು, ಸ್ಥಳೀಯರ ನೆರವಿನಿಂದ ಆಹಾರ, ಕಂಬಳಿ ಪಡೆದಿದ್ದಾರೆ. ಪ್ರತಿ ವರ್ಷ ಚಳಿಗಾಲದಲ್ಲಿ ಹಿಮಪಾತವಾಗುತ್ತದೆ. ಆದರೆ ಈ ವರ್ಷ ಅತಿ ಹೆಚ್ಚು ಮಂದಿ ಪ್ರವಾಸಕ್ಕೆ ಬಂದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!