Saturday, March 25, 2023

Latest Posts

ಶ್ವಾಸಕೋಶದೊಳಗೆ ರಕ್ತ ಹೋಗಿತ್ತು, ಧ್ರುವನಾರಾಯಣ್ ಕಡೆಯ ಕ್ಷಣಗಳ ಬಗ್ಗೆ ವೈದ್ಯರ ಮಾಹಿತಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಸ್ಪತ್ರೆಯಲ್ಲಿ ಏನಾಗಿತ್ತು ಎನ್ನುವ ಬಗ್ಗೆ ವೈದ್ಯರ ತಂಡದಲ್ಲಿ ಒಬ್ಬರಾದ ಡಾ. ಮಂಜುನಾಥ್ ವಿವರಣೆ ನೀಡಿದ್ದಾರೆ.

ಮುಂಜಾನೆ ಅವರಿಗೆ ಹೃದಯಾಘಾತವಾಗಿದೆ, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅದಾಗಲೇ ಅವರು ಕೋಮಾ ಸ್ಥಿತಿಯಲ್ಲಿದ್ದರು. ಅವರಿಗೆ ತೀವ್ರ ರಕ್ತವಾಂತಿಯಾಗಿತ್ತು, ಅತಿಯಾದ ರಕ್ತಸ್ರಾವದಿಂದ ತೀವ್ರ ಅಸ್ವಸ್ಥರಾಗಿದ್ದರು. ರಕ್ತವಾಂತಿಯಾದಾಗ ಉಸಿರನ್ನು ದೀರ್ಘವಾಗಿ ಎಳೆದುಕೊಂಡ ಕಾರಣ ರಕ್ತ ಶ್ವಾಸಕೋಶದೊಳಕ್ಕೆ ನುಗ್ಗಿದೆ. ಅದರಿಂದಾಗಿ ಉಸಿರಾಡಲೂ ತೊಂದರೆಯಾಗಿದೆ. ಅವರ ಸಾವಿಗೆ ಇದೇ ಕಾರಣವಾಗಿರಬಹುದು ಎಂದಿದ್ದಾರೆ.

ಹೃದಯಾಘಾತವಾದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ಬಂದಿದ್ದರೆ ಅವರನ್ನು ಉಳಿಸಬಹುದಾಗಿತ್ತು. ಕಾರ್‌ನಲ್ಲಿಯೇ ರಕ್ತವಾಂತಿಯಾಗಿದೆ. ಸುಮಾರು ಮೂರು ಲೀಟರ್‌ನಷ್ಟು ರಕ್ತ ಹೋಗಿದೆ ಎಂದು ಅಂದಾಜಿಸಲಾಗಿದೆ. ಅಷ್ಟೊಂದು ರಕ್ತ ದೇಹದಿಂದ ಆಚೆ ಹೋದರೆ ಅದು ಮಾರಣಾಂತಿಕ. ಅವರ ಹೃದಯ ಯಾವ ಚಿಕಿತ್ಸೆಗೂ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!