April 28, 2026
Tuesday, April 28, 2026
spot_img

ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ವೃದ್ಧನ ಕೊ*ಲೆಗೈದು ಮುಖ ಸುಟ್ಟು ಪರಾರಿಯಾದ ಹಂತಕರು

ಹೊಸದಿಗಂತ ವಿಜಯಪುರ:

ಶಾಂತಿಯುತವಾಗಿದ್ದ ಭೀಮಾತೀರದ ಇಂಡಿ ತಾಲೂಕಿನ ತೆನಹಳ್ಳಿ ಗ್ರಾಮದಲ್ಲಿ ಕ್ರೌರ್ಯದ ಪರಾಕಾಷ್ಠೆ ಮೆರೆದಿರುವ ಘಟನೆಯೊಂದು ವರದಿಯಾಗಿದೆ. 72 ವರ್ಷದ ವೃದ್ಧ ಗುರುಬಸಯ್ಯ ರೇವಯ್ಯ ಹಿರೇಮಠ ಎಂಬುವವರನ್ನು ದುಷ್ಕರ್ಮಿಗಳು ಅತಿ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ.

ಕೇವಲ ಕೊಲೆ ಮಾಡುವುದಷ್ಟೇ ಅಲ್ಲದೆ, ವೃದ್ಧನ ಗುರುತು ಸಿಗದಂತೆ ಮಾಡಲು ಮುಖಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ವಿಕೃತ ಘಟನೆ ನಡೆದಿದೆ. ಹತ್ಯೆಯಾದ ಗುರುಬಸಯ್ಯ ಅವರ ಶವವು ಭೀಬತ್ಸ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಂತಕರು ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬರ್ಬರ ಹತ್ಯೆಗೆ ಹಳೆಯ ದ್ವೇಷ ಕಾರಣವೇ ಅಥವಾ ಬೇರೆ ಯಾವುದಾದರೂ ಆಸ್ತಿ ವಿಚಾರವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಹಂತಕರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !