August 5, 2026
Wednesday, August 5, 2026
spot_img

ಉಳ್ಳಾಲದಲ್ಲಿ ಅವಿವಾಹಿತ ಯುವಕ ನೇಣು ಬಿಗಿದು ಆತ್ಮಹ*ತ್ಯೆ: ಡೆತ್ ನೋಟ್ ನಲ್ಲಿ ಸಾವಿಗೆ ಕಾರಣರಾದ ಮೂವರ ಹೆಸರು ಉಲ್ಲೇಖ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅವಿವಾಹಿತ ಯುವಕನೋರ್ವ ಮನೆಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ‌ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಸರಕಾರಿ ಶಾಲೆಯ ಬಳಿ ನಡೆದಿದ್ದು, ಮೃತ ಯುವಕ ಡೆತ್ ನೋಟಲ್ಲಿ ಸಾವಿಗೆ ಕಾರಣರಾದ ಮೂವರ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿತಿನ್ ಕುಮಾರ್ ಯಾನೆ ನೀತು (35) ಆತ್ಮಹತ್ಯೆಗೈದ ಯುವಕನಾಗಿದ್ದಾನೆ.

ಮೂಲತ: ಕೋಟೆಕಾರು ಪಟ್ಟಣದ ಕೊಂಡಾಣ, ಮಿತ್ರನಗರ ನಿವಾಸಿಯಾಗಿರುವ ನಿತಿನ್ ಪಿಲಾರುವಿನ ಬಾವ (ಅಕ್ಕನ ಗಂಡ) ಪ್ರಶಾಂತ್ ಪಕ್ಕಳ ಅವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿದ್ದರು. ತೊಕ್ಕೊಟ್ಟು ಕಾಪಿಕಾಡುವಿನ ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ನಿತಿನ್ ಕಳೆದ ಐದು ವರುಷಗಳಿಂದ ಕಾಲಿನ ವೆರಿಕೋಸ್ ಸಮಸ್ಯೆಯಿಂದ ಬಳಲುತ್ತಿದ್ದನಂತೆ .ಕಳೆದ ಮೂರು ದಿನಗಳಿಂದ ನಿತಿನ್ ಜ್ವರ ಭಾದೆಯಿಂದ ಮನೆಯಲ್ಲೇ ಉಳಿದಿದ್ದು, ಮಂಗಳವಾರ ರಾತ್ರಿ ಊಟ ಮುಗಿಸಿ ಕೋಣೆಗೆ ಸೇರಿದ ಬಳಿಕ ಬುಧವಾರ ಬೆಳಿಗ್ಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ:

ನಿತಿನ್ ನ ಪ್ಯಾಂಟ್ ನ ಜೇಬಿನಲ್ಲಿ ಚೀಟಿಯೊಂದು ಸಿಕ್ಕಿದ್ದು ಅದರಲ್ಲಿ ನನ್ನ ಸಾವಿಗೆ ಚರಣ್, ಪುಟ್ಟ, ಕಾರ್ತಿಕ್ ಕಾರಣ ಎಂಬುದಾಗಿ ಮೂವರ ಹೆಸರನ್ನ ಉಲ್ಲೇಖಿಸಿದ್ದು, ಈ ಮೂವರ ದುಷ್ಪ್ರೇರಣೆಯಿಂದಲೇ ನಿತಿನ್ ಆತ್ಮಹತ್ಯೆಗೈಯಲು ಕಾರಣವಾಗಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿತಿನ್ ಅವರ ಬಾವ ಪ್ರಶಾಂತ್ ಪಕ್ಕಳ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !