ಹಿಂದುಗಳ ಮಾನದ ಮೇಲೆ ಪ್ರಹಾರ ಆದರೆ ತಕ್ಕ ಉತ್ತರ ನೀಡಿ: ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕರೆ

ಹೊಸದಿಗಂತ ವರದಿ, ಶಿವಮೊಗ್ಗ:

ಹಿಂದುಗಳ ಮೇಲಿನ ಆಕ್ರಮಣ, ಅತ್ಯಾಚಾರ ತಡೆಯಲು ಪ್ರತಿ ಮನೆಯಲ್ಲಿ ಶಸ್ತ್ರ ಇರಿಸಿಕೊಳ್ಳಬೇಕು ಎಂದು ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕರೆ ನೀಡಿದ್ದಾರೆ.
ನಗರದ ಎನ್‌ಇಎಸ್ ಮೈದಾನದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ತ್ರೈವಾರ್ಷಿಕ ಸಮ್ಮೇಳನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಎಲ್ಲರ ಮನೆಯಲ್ಲೂ ತರಕಾರಿ ಕತ್ತರಿಸುವ ಚಾಕು ಇದೆ. ಅದನ್ನು ಯಾವಾಗಲೂ ಹರಿತವಾಗೇ ಇಡಿ. ಏನೂ ಸಿಗುತ್ತಿಲ್ಲ ಅಂತ ಈಗ ಲವ್ ಜಿಹಾದ್‌ಗೆ ಇಳಿದಿದ್ದಾರೆ. ಹಿಂದುಗಳ ಮಾನದ ಮೇಲೆ ಪ್ರಹಾರ ಆದರೆ ತಕ್ಕ ಉತ್ತರ ನೀಡಿ ಎಂದು ಕರೆ ನೀಡಿದರು.
ಪ್ರತಿಯೊಬ್ಬರಿಗೂ ಆತ್ಮ ರಕ್ಷಣೆ ಮಾಡಿಕೊಳ್ಳಲು ಅಧಿಕಾರ ಇದೆ. ಜೊತೆಗೆ ಸಮಾಜ, ದೇಶ, ಹಿಂದು ಧರ್ಮದ ರಕ್ಷಣೆಗೆ ಸಿದ್ಧವಾಗಿರುವ ಅಧಿಕಾರ ಇದೆ. ಶಾಂತಿ ನಮ್ಮ ಸಂಸ್ಕೃತಿ. ಆದರೆ ಅತ್ಯಾಚಾರ, ಆಕ್ರಮಣ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಈಗ ಬೇರೆಯವರು ನಮ್ಮನ್ನು ಬಲಿ ತೆಗೆದುಕೊಳ್ಳುವ ಸಮಯ ಅಲ್ಲ ನಮ್ಮ ತಂಟೆಗೆ ಬಂದವರ ಬಲಿ ಪಡೆಯುವ ಸಮಯ. 1948ರಲ್ಲಿ ಶಿವಮೊಗ್ಗದಲ್ಲಿ ಶಿವಮೂರ್ತಿ ಹತ್ಯೆಯಿಂದ ಆರಂಭಿಸಿ ವಿಶ್ವನಾಥ ಶೆಟ್ಟಿಘಿ, ಗೋಕುಲ್, ರುದ್ರೇಶ್, ಹರ್ಷ, ಪ್ರವೀಣ್ ನೆಟ್ಯಾರು, ಪ್ರಶಾಂತ ಪೂಜಾರಿ, ಕುಟ್ಟಪ್ಪ ಮಡಿಕೇರಿ, ಸೌಮ್ಯ ಭಟ್ ಹೀಗೆ ಸಾಲು ಸಾಲು ಹತ್ಯೆಗಳು ನಡೆದಿವೆ. ಇವರೆಲ್ಲಾ ದೇಶಕ್ಕಾಗಿ ಬಲಿ ಆಗಿದ್ದಾರೆ. ಮುಂದೆ ಇಂತಹ ಹತ್ಯೆಗಳು ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!