ಟ್ವಿಟರ್ ಖಾತೆಯಿಂದ ಬ್ಲೂಟಿಕ್​ ಮಾಯ: ಬೇಸರಗೋಡ ಪುನೀತ್ ಅಭಿಮಾನಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪುನೀತ್ ರಾಜ್‌ಕುಮಾರ್ ನಿಧನರಾಗಿ ಹಲವು ತಿಂಗಳಾಗಿದ್ದು, ಆದರೂ ಅಭಿಮಾನಿಗಳ ಮನದಲ್ಲಿ ಸದಾ ಇರಲಿದ್ದಾರೆ. ಪುನೀತ್​ ಪುತ್ಥಳಿಗಳನ್ನು ಸ್ಥಾಪಿಸುವ ಮೂಲಕ ಜನರು ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಈ ನಡುವೆ ಅಭಿಮಾನಿಗಳು ಟ್ವಿಟರ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಪುನೀತ್ ರಾಜ್‌ಕುಮಾರ್ ಅವರ ಟ್ವಿಟರ್ ಖಾತೆಯಿಂದ ಬ್ಲ್ಯೂ ಟಿಕ್ ಅಥವಾ ನೀಲಿ ಗುರುತ ಮಾಯವಾಗಿದ್ದು, ಇದರಿಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ನಿಧನರಾಗಿ 9 ತಿಂಗಳು ಆಗುತ್ತಾ ಬಂತು. ಈ ಹಿನ್ನೆಲೆ ಅವರು ಅಗಲಿದ ಬಳಿಕ ಅವರ ಟ್ವಿಟರ್ ಅಕೌಂಟ್ ಅಧಿಕೃತ ಖಾತೆಯಾಗಿ ಉಳಿದಿಲ್ಲ. ಜೊತೆಗೆ ಕಳೆದ 8 ತಿಂಗಳಿನಿಂದ ಅವರ ಖಾತೆ ಆ್ಯಕ್ಟಿವ್ ಆಗಿಲ್ಲ ಎಂಬ ಕಾರಣಕ್ಕೆ ಟ್ವಿಟರ್​​ ನೀಲಿ ಟಿಕ್ ಅನ್ನು ತೆಗೆದು ಹಾಕಿದೆ ಎನ್ನಲಾಗುತ್ತಿದೆ.


ಬ್ಲ್ಯೂ ಟಿಕ್ ಅಂದ್ರೆ?
ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಹಲವು ಜನರು ಅಥವಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದಿರುತ್ತಾರೆ. ಹೀಗಾದಾಗ ಅವರ ಅಧಿಕೃತ ಖಾತೆ ಯಾವುದೆಂದು ಗುರುತಿಸುವ ಸಲುವಾಗಿ ಟ್ವಿಟರ್ ಸೇರಿದಂತೆ ಬಹುತೇಕ ಎಲ್ಲ ಸೋಶಿಯಲ್ ಮೀಡಿಯಾ ಸಂಸ್ಥೆಗಳು ಸೆಲೆಬ್ರೆಟಿಗಳ ಖಾತೆಯ ಮುಂದೊಂದು ನೀಲಿ ಟಿಕ್ ಅನ್ನು ನೀಡಿರುತ್ತವೆ. ಸದ್ಯ ಪುನೀತ್​​ ಅವರ ಟ್ವಿಟರ್​ ಖಾತೆಯಲ್ಲಿ ಬ್ಲ್ಯೂ ಟಿಕ್ ಅನ್ನು ತೆಗೆಯಲಾಗಿದ್ದು, ಇದು ಅಪ್ಪು ಅವರಿಗೆ ಮಾಡಿದ ಅವಮಾನವೆಂದು ಟ್ವಿಟರ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!