ಜೀಸಸ್‌ ಕ್ರೈಸ್ಟ್‌ ಹೆಸರಿನ ನಕಲಿ ಖಾತೆಗೆ ಬ್ಲ್ಯೂ ಟಿಕ್‌ : ಎಲಾನ್‌ ಮಸ್ಕ್‌ ನಡೆಗೆ ಜನರಿಂದ ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟ್ವಿಟರ್‌ ದಿನೇ ಒಂದಲ್ಲ ಒಂದು ಬದಲಾವಣೆಗಳು ನಡೆಯುತ್ತಿದ್ದು, ಪರ-ವಿರೋಧ ಚರ್ಚೆಯೂ ಆರಂಭವಾಗಿದೆ.

ಎಲಾನ್‌ ಮಸ್ಕ್‌ ಅವರು ಟ್ವಿಟರ್‌ಅನ್ನು ಖರೀದಿಸಿದ ಬಳಿಕ ಟ್ವಿಟರ್‌ನಲ್ಲಿ ನಕಲಿ ಖಾತೆಗಳನ್ನು ರದ್ದುಗೊಳಿಸುವುದು ಸೇರಿ ಹಲವು ಹೊಸ ನಿಯಮಗಳನ್ನು ರೂಪಿಸಿದ್ದರು. ಇದರ ಬೆನ್ನಲ್ಲೇ ಟ್ವಿಟರ್‌ನಲ್ಲಿ ಜೀಸಸ್‌ ಕ್ರೈಸ್ಟ್‌ (Jesus Christ) ಹೆಸರಿನಲ್ಲಿ ಖಾತೆಯನ್ನು ಸಂಸ್ಥೆಯು ವೇರಿಫೈ ಮಾಡಿದೆ.

ಇತ್ತ ನಕಲಿ ಖಾತೆಗಳನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿದ ಎಲಾನ್‌ ಮಸ್ಕ್‌, ಈಗ ಏಕೆ ನಕಲಿ ಖಾತೆಯನ್ನು ವೇರಿಫೈ ಮಾಡಿದ್ದಾರೆ ಎಂದು ಹಲವರು ಪ್ರಶ್ನೆ ಕೇಳಿದ್ದಾರೆ. ಅಲ್ಲದೆ ದೇವರ ಹೆಸರಿನಲ್ಲಿ ತೆಗೆದ ಖಾತೆಗೆ ಬ್ಲ್ಯೂಟಿಕ್‌ ಏಕೆ ನೀಡಲಾಗಿದೆ.

ಜೀಸಸ್‌ ಕ್ರೈಸ್ಟ್‌ ಹೆಸರಿನಲ್ಲಿ ತೆಗೆದ ಟ್ವಿಟರ್‌ ಖಾತೆಯ ಬಯೋ, ‘ಕಾರ್ಪೆಂಟರ್‌, ಹೀಲರ್‌ ಗಾಡ್’‌ ಎಂದಿದೆ. ಈಗ ಇದೇ ಖಾತೆಗೆ ಬ್ಲ್ಯೂಟಿಕ್‌ ನೀಡಲಾಗಿದೆ.‌ ಇದರಿಂದಾಗಿ, ಅಕೌಂಟ್‌ ವೇರಿಫೈ ಮಾಡಲು ಇರುವ ಮಾನದಂಡಗಳಾದರೂ ಯಾವವು ಎಂಬ ಪ್ರಶ್ನೆಯೂ ಮೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!