ಕಂಡಕ್ಟರ್‌ಗೆ ಗುದ್ದಿದ ಬಿಎಂಟಿಸಿ ಬಸ್‌: ಸ್ಥಳದಲ್ಲೇ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಲಿಕಾನ್ ಸಿಟಿಯಲ್ಲಿ ಇಂದು ಚಾಲಕನ ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್‌ ಕಟ್ಟಡಕ್ಕೆ ಗುದ್ದಿದೆ. ಬಸ್‌ ಮತ್ತು ಗೋಡೆಯ ಮಧ್ಯೆ ಸಿಲುಕಿ ಕಂಡಕ್ಟರ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಬೆಂಗಳೂರಿನ ಯಲಹಂಕದ 4ನೇ ಹಂತದಲ್ಲಿ ಈ ಘಟನೆ ನಡೆದಿದೆ. ಮೃತ ಕಂಡಕ್ಟರ್ ಸೋಮಪ್ಪ ಎಂಬುದಾಗಿ ಗುರುತಿಸಲಾಗಿದೆ.

ಇನ್ನು ಬಸ್‌ನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬಸ್‌ ಗುದ್ದಿದ ರಭಸಕ್ಕೆ ಬಸ್‌ ನಿಲ್ದಾಣದ ಬಳಿ ಇದ್ದ ಕಟ್ಟಡದ ಗೋಡೆ ಬಿದ್ದಿದೆ.

ಹಣದ ಲೆಕ್ಕಕೊಟ್ಟು ವಾಪಾಸ್ ಬರುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಕಂಡಕ್ಟರ್ ಗೆ ಡಿಕ್ಕಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!