Sunday, June 4, 2023

Latest Posts

ಎಲ್ಲರೂ ನಾಳೆ ತಪ್ಪದೇ ಮತದಾನ ಮಾಡಿ: ಕರ್ನಾಟಕ ಜನತೆಗೆ ಸಿಎಂ ಬೊಮ್ಮಾಯಿ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣೆಯ ಮತದಾನಕ್ಕೆ ಕೊನೆಗೂ ಹತ್ತಿರವಾಗಿದೆ. ಚುನಾವಣಾ ಆಯೋಗದಿಂದ ( Election Commission ) ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.

ಇದೇ ಸಂದರ್ಭ ಕರ್ನಾಟಕ ಜನತೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಶೇಷ ಮನವಿ ಮಾಡಿದ್ದಾರೆ.

ಟ್ವಿಟ್ ಮಾಡಿದ ಸಿಎಂ, ಕನ್ನಡ ನಾಡಿನ ಸಮಸ್ತ ಮತದಾರ ಬಂಧುಗಳೆ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಈ ನಾಡಿನ ಪ್ರಜೆಗಳಾದ ನಾವು, ನೀವೆಲ್ಲರೂ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸುರಕ್ಷಿತ, ಸುಭದ್ರ ಮತ್ತು ಸಶಕ್ತ ಕರ್ನಾಟಕ ನಿರ್ಮಾಣ ಮಾಡಲು ನೀವೆಲ್ಲರೂ ತಪ್ಪದೇ ನಿಮ್ಮ ಹಕ್ಕು ಚಲಾಯಿಸಬೇಕು. ದಯವಿಟ್ಟು ನಾಳೆ (ಮೇ 10 ರಂದು) ನಡೆಯುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಎಲ್ಲ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!