ಹೊಸ ವರ್ಷಕ್ಕೆ ಗುಡ್‌ನ್ಯೂಸ್‌ ಕೊಟ್ಟ ಬಿಎಂಟಿಸಿ, 320 ಎಲೆಕ್ಟ್ರಿಕ್ ಎಸಿ ಬಸ್‌ಗಳು ರಸ್ತೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹೊಸ ವರ್ಷಕ್ಕೆ ಜನವರಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 320 ಹೊಚ್ಚ ಹೊಸ ಬಸ್‌ಗಳು ನಗರದಲ್ಲಿ ಸಂಚಾರ ಮಾಡಲಿವೆ.

320 ಎಸಿ ಎಲೆಕ್ಟ್ರಿಕ್ ಬಸ್ಸುಗಳಿಗೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಅನ್ನ ಅಶೋಕ್ ಲೇಲ್ಯಾಂಡ್ ಕಂಪನಿಯ ಪಾಲುದಾರ ಸಂಸ್ಥೆಯಾದ ಓಂ ಕಂಪನಿ ಪಡೆದುಕೊಂಡಿದೆ. ಈಗಾಗಲೇ ವರ್ಕ್ ಆರ್ಡರ್ ಕೂಡ ನೀಡಲಾಗಿದೆ.

12 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ 320 ಬಸ್ಸುಗಳನ್ನು ತೆಗೆದುಕೊಳ್ಳಲಾಗುತ್ತದೆ. ಒಂದು ಕಿಮೀ 65 ರೂ.ನಿಂದ 80 ಪೈಸೆಯಂತೆ ಬಿಎಂಟಿಸಿ ಈ ಬಸ್​ಗಳಿಗೆ ಹಣ ನೀಡಲಿದೆ ಎಂದು ಬಿಎಂಟಿಸಿಯ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಬಸ್​ಗಳಿಗೆ ಚಾಲಕರನ್ನು ಅಶೋಕ್ ಲೇಲ್ಯಾಂಡ್ ಕಂಪನಿ ನೇಮಕ ಮಾಡುತ್ತದೆ. ನಿರ್ವಾಹಕರನ್ನು ಸರ್ಕಾರ ನೇಮಕ ಮಾಡುತ್ತದೆ. ಡಿಸೆಂಬರ್ 15 ರ ನಂತರ ಟ್ರಯಲ್ ರನ್​ಗಾಗಿ ಬಸ್​​ಗಳು ಬೆಂಗಳೂರಿಗೆ ಬರಲಿವೆ. ಈ ಎಸಿ ಎಲೆಕ್ಟ್ರಿಕ್ ಬಸ್​ಗಳು ಮೆಜೆಸ್ಟಿಕ್​ನಿಂದ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಮಾಡಲಿವೆ. ಸದ್ಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಬಿಎಂಟಿಸಿಯ ವೋಲ್ವೋ ಬಸ್ಸುಗಳು ಸಂಚಾರ ಮಾಡುತ್ತಿದ್ದು, ಈಗಿರುವ ಎಲ್ಲ ವೋಲ್ವೋ ಬಸ್ಸುಗಳು ನಗರದ ಬೇರೆ ಬೇರೆ ಮಾರ್ಗದಲ್ಲಿ ಸಂಚಾರ ಮಾಡಲಿವೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!