ಪ್ರಯಾಣಿಕರಿಗೆ ಶಾಕ್‌ ನೀಡಿದ ಬಿಎಂಟಿಸಿ: ಹೊಸ ವರ್ಷಕ್ಕೆ ಬಸ್‌ ಟಿಕೆಟ್‌ ದರ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೊಸವರ್ಷಕ್ಕೆ ಪ್ರಯಾಣಿಕರಿಗೆ ಬಿಎಂಟಿಸಿ ಶಾಕ್‌ ನೀಡಿದೆ.  ಹೊಸ ವರ್ಷದ ಮೊದಲ ವಾರದಲ್ಲೇ ಬಸ್‌ ಟಿಕೆಟ್‌, ಬಸ್‌ ಪಾಸ್‌ ದರದಲ್ಲಿ ಏರಿಕೆಯಾಗಲಿದೆ. ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಬಿಎಂಟಿಸಿ ಈ ನಿರ್ಧಾರ ಕೈಗೊಂಡಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಇದರ ಜೊತೆಗೆ ಬಿಎಂಟಿಸಿ ಆರ್ಥಿಕ ನಷ್ಟ ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಟಿಕೆಟ್‌ ದರ ಮಾತ್ರವಲ್ಲದೆ ಮಾಸಿಕ ಪಾಸ್‌ ತೆಗೆದುಕೊಳ್ಳುವವರಿಗೂ ಹೊಡೆತ ಬೀಳಲಿದ್ದು, ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ಪಾಸ್​ ಬಳಸಿ ಉಚಿತ ಪ್ರಯಾಣ ಮಾಡುವಂತಿಲ್ಲ.

ಟಿಕೆಟ್‌‌, ಪಾಸ್ ದರ ಹೆಚ್ಚಳ ಎಷ್ಟು ಗೊತ್ತಾ?

ವಜ್ರ ವೋಲ್ವೋ ಬಸ್‌ನ ಪ್ರಸ್ತುತ ಮಾಸಿಕ ಪಾಸ್ ದರ 1428+ 72ರೂಪಾಯಿ ಜಿಎಸ್ಟಿ ಸೇರಿ ಒಟ್ಟು 1500 ರೂಪಾಯಿ

ಸದ್ಯ ಪರಿಷ್ಕೃತ ವಜ್ರ ಮಾಸಿಕ ಪಾಸ್‌ನ ದರ 1714.29 ಪೈಸೆ + ಜಿಎಸ್ಟಿ 85.71 ಪೈಸೆ ಸೇರಿ ಒಟ್ಟು 1800 ರೂಪಾಯಿಯಾಗಿದೆ.

ವಜ್ರ ವೋಲ್ವೋ ಪ್ರಸ್ತುತ ದೈನಿಕ ಪಾಸಿನ ದರ 95+ ಜಿಎಸ್ಟಿ 5 ರೂಪಾಯಿ ಸೇರಿ 100 ರೂಪಾಯಿ ಇದೆ

ಹೊಸ ವರ್ಷಕ್ಕೆ ಪರಿಷ್ಕೃತ ದರ 114.29+ 5.21 ಪೈಸೆ ಸೇರಿ 120 ರೂಪಾಯಿಗೆ ಹೆಚ್ಚಳವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!