Saturday, October 1, 2022

Latest Posts

ರೈಲ್ವೇ ಟ್ರಾಕ್‌ ಮೇಲೆ ಇನ್ಸ್ಟಾಗ್ರಾಮ್‌ ರೀಲ್ ಮಾಡುತ್ತಿದ್ದ ಯುವಕನಿಗೆ ಡಿಕ್ಕಿಯಾದ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ರೈಲ್ವೇ ಟ್ರ್ಯಾಕ್‌ನಲ್ಲಿ ಮೇಲೆ ನಿಂತು ಇನ್‌ಸ್ಟಾಗ್ರಾಮ್‌ ʼರೀಲ್ʼ ಮಾಡಲು ಪ್ರಯತ್ನಿಸುತ್ತಿದ್ದ ಹದಿಹರೆಯದ ಹುಡುಗನೊಬ್ಬ ವೇಗವಾಗಿ ಬಂದ ರೈಲಿಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ.
ವಾರಂಗಲ್ ಜಿಲ್ಲೆಯ ಸ್ಥಳೀಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಅಕ್ಷಯ್ ಎಂಬಾತ ರೈಲ್ವೇ ಟ್ರ್ಯಾಕ್ ಉದ್ದಕ್ಕೂ ನಡೆದುಕೊಂಡು ಹೋಗುತ್ತ ರೀಲ್‌ ಮಾಡುತ್ತಿದ್ದ. ಚಲಿಸುತ್ತಿರುವ ರೈಲನ್ನು ತನ್ನ ಹಿನ್ನೆಲೆಯಾಗಿ ಇರಿಸಿಕೊಂಡು ವಿಡಿಯೋ ಮಾಡಲು ಯತ್ನಿಸುತ್ತಿದ್ದ. ಆದರೆ ವೇಗವಾಗಿ ಬರುತ್ತಿದ್ದ ರೈಲಿನ ರಭಸಕ್ಕೆ ಸಿಕ್ಕಿ ಹಾರಿ ಬಿದ್ದಿದ್ದಾನೆ.
ಹಳಿಯಲ್ಲಿದ್ದ ಅಕ್ಷಯ್‌ನನ್ನು ಗಮನಿಸಿದ ರೈಲ್ವೇ ಸಿಬ್ಬಂದಿ ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿ‌ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರೈಲ್ವೆ ಹಳಿಗಳಂತಹ ಅಪಾಯಕಾರಿ ಪ್ರದೇಶಗಳಲ್ಲಿ ಇನ್ಸಾಗ್ರಾಮ್ ರೀಲ್‌ಗಳನ್ನು ಮಾಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಯುವಕ- ಯುವತಿಯರನ್ನು ಒಳಗೊಂಡ ಅಪಘಾತಗಳು ದೇಶದಲ್ಲಿ ತುಂಬಾ ಸಾಮಾನ್ಯವಾಗುತ್ತಿರುವುದು ದುರಾದೃಷ್ಟರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!