ರಾಯಗಢ ಸಮುದ್ರದಲ್ಲಿ ಪತ್ತೆಯಾದ ಬೋಟ್​,​ ಶಸ್ತ್ರಾಸ್ತ್ರ ಉಗ್ರರದ್ದಲ್ಲ: ದೇವೇಂದ್ರ ಫಡ್ನವೀಸ್ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ರಾಯಗಢ ಸಮುದ್ರದ ಬಳಿ ಪತ್ತೆಯಾಗಿರುವ ಬೋಟ್​ ಹಾಗೂ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಬೋಟ್ ಆಸ್ಟ್ರೇಲಿಯಾಗೆ ಸೇರಿದ್ದಾಗಿದೆ. ಇದು ಮಸ್ಕತ್ ಮೂಲಕ ಯುರೋಪ್‌ಗೆ ತೆರಳಬೇಕಾಗಿತ್ತು ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಈ ದೋಣಿ ಆಸ್ಟ್ರೇಲಿಯಾದ ಪ್ರಜೆಯದ್ದು. ಸಮುದ್ರದಲ್ಲಿ ಇಂಜಿನ್ ಹಾಳಾಗಿರುವ ಕಾರಣ ಅದರಲ್ಲಿದ್ದ ಜನರನ್ನು ಕೊರಿಯಾದ ಬೋಟ್‌ನಿಂದ ರಕ್ಷಿಸಲಾಗಿದೆ. ಇದೀಗ ಹರಿಹರೇಶ್ವರ ಕಡಲತೀರ ತಲುಪಿದೆ ಎಂದರು.

ದೋಣಿಯಲ್ಲಿ ಮೂರು ಎಕೆ 47 ರೈಫಲ್​​ಗಳಿದ್ದವು. ಸಮುದ್ರದಲ್ಲಿ ಅಬ್ಬರವಿಳಿತದ ಕಾರಣ ಅರ್ಧ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಕೇಂದ್ರೀಯ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯದ ಮಾಹಿತಿ ಇಲ್ಲ. ಆದರೆ, ಎಲ್ಲ ರೀತಿಯಿಂದಲೂ ತನಿಖೆ ಮಾಡುತ್ತೇವೆ. ಬರುವ ದಿನಗಳಲ್ಲಿ ಹೆಚ್ಚಿನ ಹಬ್ಬಗಳಿರುವ ಕಾರಣ ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!