ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
2 ಕಪ್ ಪಾಸ್ತಾ
1/2 ಕಪ್ ಕ್ಯಾಪ್ಸಿಕಂ, ಟೊಮೆಟೊ, ಕ್ಯಾರೆಟ್, ಈರುಳ್ಳಿ
ಆಲೂಗಡ್ಡೆ, ಹಸಿ ಬಟಾಣಿ, ಹಸಿ ಮೆಣಸಿನಕಾಯಿ
1 ಟೇಬಲ್ಸ್ಪೂನ್ ಬೆಳ್ಳುಳ್ಳಿ, ನೀರು, ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
2 ಟೀ ಚಮಚ ಸೋಯಾ ಸಾಸ್
1 ಟೀಚಮಚ ವಿನೆಗರ್
1 ಟೀಚಮಚ ರೆಡ್ ಚಿಲ್ಲಿ ಸಾಸ್
1 ಟೀಚಮಚ ಟೊಮೆಟೊ ಸಾಸ್
1/2 ಟೀಚಮಚ ಪೆಪ್ಪರ್ ಪೌಡರ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು, ಎಣ್ಣೆ ಹಾಕಿ ಕುದಿಯಲು ಬಿಡಿ. ಬಳಿಕ ಎರಡು ಕಪ್ ಪಾಸ್ತಾ ಸೇರಿಸಿ ಬೇಯಿಸಿ. ಇನ್ನೊಂದು ಪ್ಯಾನ್ಗೆ ಎಣ್ಣೆ ಹಾಕಿ ಚಾಪ್ ಮಾಡಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬೇಯಿಸಿ. ನಂತರ ಅದಕ್ಕೆ ಹೆಚ್ಚಿಕೊಟ್ಟುಕೊಂಡ ಕ್ಯಾರೆಟ್, ಆಲೂ, ಬೀನ್ಸ್, ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ, ಬಟಾಣಿ, ಟೊಮ್ಯಾಟೊ ಎಲ್ಲವೂ ಹಾಕಿ ಸ್ವಲ್ಪ ಹೊತ್ತು ಬೇಯಿಸಿ. ಬಳಿಕ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮ್ಯಾಟೊ ಸಾಸ್, ವಿನೆಗರ್ ಹಾಕಿ ತಿರುವಿ ಕೆಲ ಕ್ಷಣಗಳ ನಂತರ ಬೇಯಿಸಿದ ಪಾಸ್ತಾವನ್ನು ನೀರಿನಿಂದ ಹೊರತೆಗೆದು ಬಾಣಲೆಗೆ ಹಾಕಿ ಪುಡಿಯಾಗದಂತೆ ಸಾಟ್ ಮಾಡಿ. ಕೊನೆಗೆ ಪೆಪ್ಪರ್ ಪೌಡರ್, ಉಪ್ಪು ಹಾಕಿ ಮತ್ತೊಮ್ಮೆ ತಿರುವಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಕೆಳಗಿಳಿಸಿ ರುಚಿಯಾದ ವೆಜಿಟೇಬಲ್ ಪಾಸ್ತಾ ಸರ್ವ್ ಮಾಡಿ.