ಮೇಷ
ಪ್ರತಿಕೂಲ ಸನ್ನಿವೇಶ ಉಂಟಾದೀತು. ತಾಳ್ಮೆಯಿಂದ ನಿಭಾಯಿಸಿ. ಕೆಲವರ ಅಸಮಾಧಾನ ಎದುರಿಸುವಿರಿ. ನೀವು ನಗುತ್ತಲೇ ವ್ಯವಹರಿಸಿ.
ವೃಷಭ
ನಿರಾಳ ಮನಸ್ಥಿತಿ. ಜಂಜಡಗಳೆಲ್ಲ ಕಳೆದ ಭಾವ. ಕೌಟುಂಬಿಕವಾಗಿ ಕೆಲವಾರು ಕೆಲಸ ನಿಮ್ಮ ಮೇಲಿದೆ. ಅತ್ತ ಹೆಚ್ಚು ಗಮನ ಕೊಡಿ.
ಮಿಥುನ
ಅಸಹನೀಯ ಸನ್ನಿವೇಶ ಎದುರಿಸಿದರೂ ಬಳಿಕ ಎಲ್ಲವೂ ಸುರಳೀತ. ಸಂಭ್ರಮದ ದಿನಕ್ಕೆ ಎದುರು ನೋಡುವಿರಿ. ಆತ್ಮೀಯರ ಭೇಟಿ.
ಕಟಕ
ಆಸ್ತಿ ಅಥವಾ ವಾಹನ ಖರೀದಿಯ ಉದ್ದೇಶ ಸಫಲವಾಗುವ ಹಂತ ಬಂದಿದೆ. ದಂಪತಿ ಮಧ್ಯೆ ಕಲಹ ನಿವಾರಣೆ. ಮನೆಯಲ್ಲಿ ಉಲ್ಲಾಸ.
ಸಿಂಹ
ಉಪಯುಕ್ತ ಉದ್ದೇಶಕ್ಕೆ ಹಣವನ್ನು ಬಳಸಿರಿ. ಅಪವ್ಯಯ ತಪ್ಪಿಸಿ. ಮನೆಯವರ ಸಂಗಡ ಸಂತೋಷದ ವಾತಾವರಣ.
ಕನ್ಯಾ
ಎಂದಿಗಿಂತ ಹೆಚ್ಚು ಕೆಲಸ. ಅಸಹನೆ ಬೇಡ. ಸಮಾಧಾನದ ನಡೆನುಡಿ ಪ್ರದರ್ಶಿಸಿ. ಶೀತಬಾಧೆ ಕಾಡಬಹುದು. ಆಪ್ತ ಬಂಧುವಿನ ಭೇಟಿ.
ತುಲಾ
ಒತ್ತಡದ ದಿನ. ಕಾರ್ಯಸಾಧನೆ ಕಷ್ಟ. ಕೆಲವರ ಅಸಹಕಾರ. ಕೌಟುಂಬಿಕ ಪರಿಸರದಲ್ಲಿ ಸಮಾಧಾನ. ಧ್ಯಾನ ಸಹಕಾರಿಯಾದೀತು.
ವೃಶ್ಚಿಕ
ಆಪ್ತರ ಜತೆ ಭಿನ್ನಭಿಪ್ರಾಯ ಸಂಭವ. ಬೇಗನೆ ಶಮನಗೊಳಿಸಿ. ದೊಡ್ಡ ಖರ್ಚಿನ ಚಿಂತೆ ಬಾಧಿಸುವುದು.ಮನೆಯಲ್ಲಿ ಸಂಭ್ರಮ.
ಧನು
ಫಲಪ್ರದ ದಿನ. ಸಂತಾನ ಭಾಗ್ಯಕ್ಕೆ ಸಂಬಂಽಸಿ ಶುಭ ಬೆಳವಣಿಗೆ. ಆಪ್ತರ ಜತೆಗಿನ ಮುನಿಸು ಶಮನ. ಸೌಹಾರ್ದ ವಾತಾವರಣ.
ಮಕರ
ಸಹೋದ್ಯೋಗಿಗಳ ಜತೆ ಬೆರೆತು ವ್ಯವಹರಿಸಿ. ದೂರ ಮಾಡಬೇಡಿ. ಮಹತ್ವದ ಹೊಣೆ ನಿಮ್ಮ ಹೆಗಲೇರಲಿದೆ. ಅದು ಹೆಮ್ಮೆ ತರಲಿದೆ.
ಕುಂಭ
ವೃತ್ತಿಯಲ್ಲಿ ಶುಭಫಲ. ಆದರೆ ಕುಟುಂಬದಲ್ಲಿ ಅಪಸ್ವರ. ಎರಡನ್ನೂ ಸರಿಯಾಗಿ ನಿಭಾಯಿಸುವ ಕಲೆ ಅರಿತುಕೊಳ್ಳಿ.
ಮೀನ
ಉಲ್ಲಾಸದ ಮನಸ್ಥಿತಿ. ನಿಮ್ಮ ಸಮಸ್ಯೆಗಳು ನೀಗುತ್ತಿರುವ ಸಂಕೇತ ತೋರುತ್ತಿದೆ. ಸಂಗಾತಿ ಜತೆಗೆ ಆತ್ಮೀಯತೆ ಕಾಯ್ದುಕೊಳ್ಳಿ.



