ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರಿನ ಡಿಕ್ಕಿಯಲ್ಲಿ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರಿನ ಡಿಕ್ಕಿಯಲ್ಲಿ 13 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕೆ
ಉತ್ತರ ಪ್ರದೇಶದ ಗೊಂಡಾದಲ್ಲಿ ಹಲವು ದಿನಗಳ ಹಿಂದೆ ಕಣ್ಮರೆಯಾಗಿದ್ದ ಬಾಲಕಿಯ ದೇಹ ಕಾರಿನ ಡಿಕ್ಕಿಯಲ್ಲಿ 1 ಶುಕ್ರವಾರ ನಸುಕಿನಲ್ಲಿ ಸಿಕ್ಕಿದೆ.
ಬಾಲಕಿಯ ಮೃತದೇಹವನ್ನು ಪೋಸ್ಟ್‌ ಮಾರ್ಟನ್‌ಗೆ ಕಳುಹಿಸಲಾಗಿದೆ. ಕೊಟ್ವಾಲಿ ಪ್ರದೇಶದ ಬೆಮೌರ್ ಗ್ರಾಮದ ಸಮೀಪ ಇರುವ ಅಸಾರಾಂ ಬಾಪು ಆಶ್ರಮದ ನೌಕರರನ್ನು ಪೊಲೀಸರು ಈಗಾಗಲೇ ವಿಚಾರಣೆಗೆ ಒಳಪಡಿಸುತ್ತಿದ್ದಾರೆಎಂದು ಅವರು ಹೇಳಿದ್ದಾರೆ.
ಆಶ್ರಮದ ಆವರಣದ ಭಾಗದಲ್ಲಿ ನಿಲ್ಲಿಸಿದ್ದ ಕಾರಿನಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗ್ರಹಿಸಿದ ವಾಚ್ ಮ್ಯಾನ್ ಸುಮನ್ ಪಾಂಡೆ, ಅದರ ಒಳಗೆ ಮೃತದೇಹ ಇರುವುದನ್ನು ಪತ್ತೆ ಹಚ್ಚಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆಶ್ರಮವನ್ನು ಸಂಪೂರ್ಣವಾಗಿ ಸೀಲ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!