ಆಂಧ್ರ ಜನರಿಗೆ ಶಾಕ್: ‘ಪವರ್​ ಹಾಲಿಡೇ’ ಘೋಷಿಸಿದ ಸರಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಧ್ರಪ್ರದೇಶದಲ್ಲಿ ವಿದ್ಯುತ್​ ಅಭಾವ ಎದುರಾಗಿದ್ದು,ಈ ಹಿನ್ನೆಲೆ ಗುರುವಾರ ಮಧ್ಯರಾತ್ರಿಯಿಂದಲೇ (ಏ.8ರಿಂದ 22ರವರೆಗೆ) ‘ವಿದ್ಯುತ್‌​ ರಜೆ’ಗಳನ್ನು ಸರ್ಕಾರ ಘೋಷಿಸಿದೆ. ಇದರ ಪ್ರಕಾರ ಕೈಗಾರಿಕೆಗಳು ಪ್ರತಿವಾರದ ಜತೆಗೆ ಹೆಚ್ಚುವರಿ ಒಂದು ರಜೆಯನ್ನು ನೀಡಬೇಕು. ದಿನದ 24 ಗಂಟೆಯ ವಿದ್ಯುತ್​ ಬಳಕೆಯಲ್ಲಿ ಶೇ.50ರಷ್ಟು ವಿದ್ಯುತ್​ ಮಾತ್ರವೇ ಬಳಕೆ ಮಾಡಬೇಕು.

ಆಂಧ್ರ ಪ್ರದೇಶದಲ್ಲಿ ಅಗತ್ಯವಾದ ವಿದ್ಯುತ್​ನಲ್ಲಿ ದಿನಕ್ಕೆ 40ರಿಂದ 50 ಮಿಲಿಯನ್​ ಯೂನಿಟ್​ಗಳ ಕೊರತೆ ಉಂಟಾಗಿದ್ದು, ಲಭ್ಯ ವಿದ್ಯುತ್​ನಲ್ಲಿ ಗೃಹ ಬಳಕೆ ಮತ್ತು ಕೃಷಿ ಹಾಗೂ ಶಾಲಾ-ಕಾಲೇಜುಗಳ ಪರೀಕ್ಷೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗಾಗಿ ಒದಗಿಸಬೇಕಿದೆ. ಹೀಗಾಗಿ ‘ವಿದ್ಯುತ್‌​ ರಜೆ’ಗಳನ್ನು ಘೋಷಿಸಿದೆ.
ಇನ್ನು 15 ದಿನಗಳಲ್ಲಿ ವಿದ್ಯುತ್​ ಸಮಸ್ಯೆ ಪರಿಹಾರ ಆಗುವ ನಿರೀಕ್ಷೆ ಇದೆ ಎಂದು ಆಂಧ್ರ ಪ್ರದೇಶದ ವಿದ್ಯುತ್​ ವಿತರಣಾ ಕಂಪನಿಯ ಮುಖ್ಯಸ್ಥ ಜೆ.ಪದ್ಮ ಜನಾರ್ಧನರೆಡ್ಡಿ ಹೇಳಿದ್ದಾರೆ.

ಕೈಗಾರಿಕೆಗಳಿಗೆ ದೊಡ್ಡ ಹೊಡೆತ

ಕೈಗಾರಿಕೆಗಳು ಕಡ್ಡಾಯವಾಗಿ ವಾರಾಂತ್ಯದ ರಜೆಯೊಂದಿಗೆ ಮತ್ತೊಂದು ದಿನ ರಜೆ ಘೋಷಿಸಬೇಕು. ಪ್ರತಿ ಸಂಜೆ 6 ಗಂಟೆ ನಂತರ ಕೇವಲ ಪಾಳಿಯಲ್ಲಿ ಕೆಲಸ ಮಾತ್ರ ಮಾಡಿಸಬೇಕು. ದಿನದ 24 ಗಂಟೆಯ ವಿದ್ಯುತ್​ ಬಳಕೆಯಲ್ಲಿ ಶೇ.50ರಷ್ಟು ವಿದ್ಯುತ್​ ಮಾತ್ರವೇ ಬಳಕೆ ಮಾಡಬೇಕು. ಸರ್ಕಾರಿ, ಖಾಸಗಿ ಕಚೇರಿಗಳು, ಶಾಂಪಿಂಗ್​ ಮಾಲ್​ಗಳಲ್ಲಿ ಎಸಿ ಬಳಕೆಯನ್ನು ಅರ್ಧದಷ್ಟು ತಗ್ಗಿಸಬೇಕು. ವಿದ್ಯುತ್​ ಅವಲಂಬಿತ ಜಾಹೀರಾತು ಫಲಕಗಳನ್ನು ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಬಳಕೆ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!