Thursday, December 8, 2022

Latest Posts

`ಅಫ್ತಾಬ್‌ ನನ್ನನ್ನು ತೀವ್ರವಾಗಿ ಥಳಿಸಿದ್ದಾರೆ’:ಶ್ರದ್ಧಾ ವಾಟ್ಸಾಪ್ ಸಂದೇಶಗಳ ಮೂಲಕ ಬಹಿರಂಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯಲ್ಲಿ ಶ್ರದ್ಧಾವಕರ್ ಎಂಬ ಯುವತಿಯನ್ನು ಆಕೆಯ ಪ್ರಿಯಕರ ಅಫ್ತಾಬ್ ಅಮೀನ್ ಪೂನಾವಾಲಾ ಬರ್ಬರವಾಗಿ ಹತ್ಯೆಗೈದು ತುಂಡು ತುಂಡಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ವಿಷಯ ಬೆಳಕಿಗೆ ಬರುತ್ತಿದೆ. ಇದೀಗ 2020 ರಲ್ಲಿ ಶ್ರದ್ಧಾ, ಅವರ ಮ್ಯಾನೇಜರ್ ಕರಣ್ ಅವರೊಂದಿಗಿನ ವಾಟ್ಸಾಪ್ ಸಂದೇಶ ಪ್ರಮುಖ ವಿಷಯಗಳನ್ನು ಬಹಿರಂಗಪಡಿಸುತ್ತದೆ.

ಅಫ್ತಾಬ್ ಈ ಹಿಂದೆಯೂ ಶ್ರದ್ಧಾವಕರ್ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದನಂತೆ. ಅವರು ಇಂದು ಹೊರಡುತ್ತಿದ್ದಾರೆ. ಇವತ್ತು ಕೆಲಸ ಮಾಡೋಕೆ ಆಗ್ತಿಲ್ಲ, ನಿನ್ನೆ ಬಿದ್ದ ಏಟಿಗೆ ಅಪಾರ ನೋವಿನಿಂದ ನರಳುತ್ತಿದ್ದೇನೆ ಬಿಪಿ ಕೂಡಾ ಕಡಿಮೆಯಾಗಿದೆ ಎಂದು ಶ್ರದ್ಧಾ 2020ರ ನವೆಂಬರ್‌ನಲ್ಲಿ ತನ್ನ ಮ್ಯಾನೇಜರ್‌ಗೆ ಕಳುಹಿಸಿರುವ ಮೆಸೇಜ್ ವೈರಲ್‌ ಆಗಿದೆ. ಅಲ್ಲದೆ, ಹಾಸಿಗೆಯಿಂದ ಎದ್ದೇಳಲು ತನಗೆ ಶಕ್ತಿ ಇಲ್ಲ, ತೀವ್ರ ಬೆನ್ನು ನೋವು ಮತ್ತು ಕಾಲುಗಳ ಸೆಳೆತದಿಂದ ಬಳಲುತ್ತಿರುವುದಾಗಿತ ತಿಳಿಸಿದರು.

ಆ ವೇಳೆ ಶ್ರದ್ಧಾ ತಾನು ಉಳಿದುಕೊಂಡಿದ್ದ ಜಾಗದಿಂದ ಬೇರೆ ಕಡೆಗೆ ಹೋಗುತ್ತಿರುವುದಾಗಿ ಮ್ಯಾನೇಜರ್ ಗೆ ತಿಳಿಸಿದ್ದಾಳೆ. ಅಲ್ಲದೇ ಪೊಲೀಸ್ ಠಾಣೆಗೆ ತೆರಳಿ ಮಹಿಳಾ ಮಂಡಳಿಯವರನ್ನು ಸಂಪರ್ಕಿಸುವುದಾಗಿ ತಿಳಿಸಿದರು. ಆಕೆ ತನ್ನ ಮುಖಕ್ಕೆ ಗಾಯವಾಗಿರುವ ಫೋಟೋವನ್ನು ತನ್ನ ಮ್ಯಾನೇಜರ್‌ಗೆ ಹಂಚಿಕೊಂಡಿದ್ದಾಳೆ. ಮತ್ತೊಂದೆಡೆ, ಶ್ರದ್ಧಾ ತನ್ನ ಸ್ನೇಹಿತರೊಂದಿಗೆ ವಾಟ್ಸಾಪ್‌ನಲ್ಲಿ ಚಾಟ್ ಮಾಡಿರುವ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.

Texts sent by Shraddha Walker in 2020

ಶ್ರದ್ಧಾ ಸ್ನೇಹಿತ ಲಕ್ಷ್ಮಣ್ ನಾಡಾರ್ ಕೂಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಶ್ರದ್ಧಾ ಮತ್ತು ಅಫ್ತಾರ್ ನಡುವೆ ಹಲವು ಬಾರಿ ಜಗಳವಾಗಿತ್ತು. ಒಮ್ಮೆ ಶ್ರದ್ಧಾ ನನಗೆ ಕರೆ ಮಾಡಿ ಬಂದು ರಕ್ಷಿಸಿ ಮನೆಯಿಂದ ಕರೆದುಕೊಂಡು ಹೋಗು ಇಲ್ಲದಿದ್ದರೆ ಅಫ್ತಾರ್ ತನ್ನನ್ನು ಕೊಂದೇ ಹಾಕುತ್ತಾನೆ ಎಂದು ಸ್ನೇಹಿತನ ಬಳಿ ಅಳಲು ತೋಡಿಕೊಂಡಿದ್ದಾಗಿ ಲಕ್ಷ್ಮಣ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!