ಬೋಕೋ ಹರಾಂ ಉಗ್ರರಿಂದ ಭೀಕರ ಹತ್ಯಾಕಾಂಡ: ಬೇಹುಗಾರರಿಗೆ ಮಾಹಿತಿ ಆರೋಪದಡಿ 50 ರೈತರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೈಜೀರಿಯಾದ ಮಿಲಿಟರಿ ಹಾಗೂ ಬೇಹುಗಾರರಿಗೆ ಸಂಘಟನೆಯ ಕುರಿತಾಗಿ ಮಾಹಿತಿಯನ್ನು ರವಾನಿಸುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ ಬೋಕೋ ಹರಾಮ್ ಉಗ್ರರು ನಡೆಸಿದ ಭೀಕರ ಹತ್ಯಾಕಾಂಡದಲ್ಲಿ 50 ರೈತರು ಸಾವನ್ನಪ್ಪಿದ್ದಾರೆ.
ದೇಶದ ಈಶಾನ್ಯ ಭಾಗದಲ್ಲಿರುವ ಕ್ಯಾಮೆರೂನಿಯನ್ ಗಡಿಯಲ್ಲಿರುವ ಬೊರ್ನೊ ಪ್ರಾಂತ್ಯದಲ್ಲಿ ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದಾರೆ. ಉಗ್ರಗಾಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 50 ರೈತರು ಸಾವನ್ನಪ್ಪಿದ್ದು, ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನೈಜೀರಿಯಾದ ಈಶಾನ್ಯ ಭಾಗದಲ್ಲಿರುವ ಬೊರ್ನೊ ರಾಜ್ಯ 2009 ರಿಂದಲೂ ಉಗ್ರಗಾಮಿ ದಾಳಿಗಳಿಂದ ತತ್ತರಿಸುತ್ತಿದೆ.
ಈ ಘಟನೆಯಿಂದ ನಾವೆಲ್ಲರೂ ತುಂಬಾ ಭಯಗೊಂಡಿದ್ದೇವೆ. 50 ಮಂದಿಯನ್ನು ಸಮಾಧಿ ಮಾಡಿದ್ದೇವೆ. ಸತ್ತವರಲ್ಲಿ ಹೆಚ್ಚಿನವರು ಭಯೋತ್ಪಾದಕರ ದಾಳಿಯ ಸಮಯದಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಉಳಿದವರು ಮರ ಸಂಗ್ರಹಿಸಲು ಹೋಗಿದ್ದರು. ಮೋಟಾರ್ ಬೈಕ್ ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದ ಬೋಕೋ ಹರಾಮ್ ಉಗ್ರರು ಮನಬಂದಂತೆ ಗುಂಡು ಹಾರಿಸತೊಡಗಿದರು.ನಮ್ಮ ಕಣ್ಣೆದುರೇ ಎಷ್ಟೋ ಜನ ಸತ್ತರು ಎಂದು ಸ್ಥಳೀಯ ರೈತರೊಬ್ಬರು ಹೇಳಿದರು.
ಮತ್ತು ತಮ್ಮ ಕಾರ್ಯಾಚರಣೆಗಳಿಗೆ ಧನ ಸಂಗ್ರಹಿಸಲು ರೈತರ ಮೇಲೆ ದಾಳಿ ನಡೆಸಿ ಈ ಪ್ರದೇಶದಲ್ಲಿನ ಬೆಲೆಬಾಳುವ ವಸ್ತುವಾದ ಜಾನುವಾರುಗಳನ್ನು ಕದಿಯುತ್ತಾರೆ ಎಂದು ಮತ್ತೊಬ್ಬ ರೈತರೊಬ್ಬರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!